ಬಂಟ್ವಾಳ: ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ, ಮಂಗಳೂರು ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ವತಿಯಿಂದ ಉಚಿತ ಕಣ್ಣುಪೊರೆ ಚಿಕಿತ್ಸಾ ಶಿಬಿರ ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರದಲ್ಲಿ ಡಿ.30ರಂದು ಜರಗಲಿದೆ.
ಈ ಶಿಬಿರದಲ್ಲಿ ಮಂಗಳೂರಿನ ತಜ್ಞ ನೇತ್ರ ವೈದ್ಯರುಗಳು ಭಾಗವಹಿಸಲಿದ್ದು, ಉಚಿತ ನೇತ್ರ ಪರೀಕ್ಷೆ ಹಾಗೂ ಕಣ್ಣು ಪೊರೆ ಚಿಕಿತ್ಸೆ ನಡೆಸಿಕೊಡಲಿರುವರು. ಕಣ್ಣು ಪೊರೆ ರೋಗಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ.ಸತೀಶ್ ಎಂ.ಸಿ. ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

