ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ ನಡೆಯಿತು. ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಸೈಕಲ್ ವಿತರಿಸಿ ಶುಭ ಹಾರೈಸಿದರು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಸದಸ್ಯರುಗಳಾದ ರಾಮದಾಸ ಶೆಣೈ ಮತ್ತು ಜಯಂತ, ಜೆಸಿಐ ಅಧ್ಯಕ್ಷ ಬಾಬು ಕೆ ವಿ, ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಳೇಶ್ವರ ಭಟ್, ಉಪಾಧ್ಯಕ್ಷ ಕ ಶಿ ವಿಶ್ವನಾಥ, ಕೋಶಾಧಿಕಾರಿ ನಿತ್ಯಾನಂದ ನಾಯಕ್, ಸದಸ್ಯ ಪದ್ಮಯ್ಯ ಗೌಡ, ಪ್ರಾಂಶುಪಾಲರುಗಳಾದ ಆದರ್ಶ ಚೊಕ್ಕಾಡಿ ಮತ್ತು ರಘುರಾಮ ಶಾಸ್ತ್ರಿ, ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್, ಸಹಶಿಕ್ಷಕರು, ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು.

