ಮೂಡುಬಿದಿರೆ: ಆರ್‍ಎಸ್‍ಎಸ್, ಬಿಜೆಪಿ ಹಿರಿಯ ಕಾರ್ಯಕರ್ತ, ಮೂಡುಬಿದಿರೆ ಕಲ್ಸಂಕದ ಎಂ.ದಾಮೋದರ ಪ್ರಭು ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ಮೂಡುಬಿದಿರೆ ಶ್ರೀವೆಂಕಟರಮಣ ಹಾಗೂ ಹನುಮಂತ ದೇವಸ್ಥಾನದ ಮಾಜಿ ಆಡಳಿತ ಮೋಕ್ತೇಸರಾಗಿದ್ದ ಅವರು, ಮೂಡುಬಿದಿರೆ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ವಿವೇಕಾನಂದ ಗ್ರಾಫಿಕ್ಸ್ ಪ್ರಿಟಿಂಗ್ ಪ್ರೆಸ್‍ನ ಮಾಲೀಕರಾಗಿದ್ದ ಅವರು ಸುಮಾರು 5 ದಶಕಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿದ್ದರು. ಅವರು ಪುತ್ರ, ಮೂವರು ಪುತ್ರಿಯರನ್ನು ಆಗಲಿದ್ದಾರೆ.

