ಕೈಕಂಬ: ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕ್ರೀಡೆಯ ಮೂಲಕ ಉಳಿಸಿ ಬೆಳೆಸುವಂತೆ ಕಂದಾವರ ಪಂಚಾಯ್ತಿ ಅಧ್ಯಕ್ಷ ವಿಜಯಗೋಪಾಲ ಸುವರ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇವರು ಶಾಲಾ ಆವರಣದಲ್ಲಿ ನಡೆದ ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ ಕೈಕಂಬ ಇದರ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ್ ಮಾತಾ ಎಜುಕೇಶನಲ್ ಟ್ರಸ್ಟಿನ ಮ್ಯಾನೆಜಿಂಗ್ ಟ್ರಸ್ಟಿ ವಾಲ್ಟರ್ ಸ್ಟೀಫನ್ ಮೆಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕಿ ಪ್ಲೋರೆನ್ಸ್ ಮೆಂಡಿಸ್, ಶಿಕ್ಷಕ-ರಕ್ಷಕ ಸಂಘದ ಸುದೇಶ್ ಕುಮಾರ್, ವಿನಯ್ ಕುಮಾರ್, ಮುಖ್ಯ ಶಿಕ್ಷಕಿ ಸ್ವರ್ಣಲತಾ ಉಪಸ್ಥಿತರಿದ್ದರು. ಪ್ರಾಂಶುಪಾಲ ಮಹೇಶ್ ಶೆಟ್ಟಿ ಸ್ವಾಗತಿಸಿ, ಫ್ಲಾವಿಯ ವಂದಿಸಿದರು. ವರ್ನೆನ್ ಕಾರ್ಯಕ್ರಮ ನಿರೂಪಿಸಿದರು.

