ಕೈಕಂಬ: ಎತ್ತಿನಹಳ್ಳ ಎಂಬ ಪ್ರದೇಶವನ್ನು ಎತ್ತಿನಹೊಳೆ ಎಂದು ನಾಮಾಂಕಿತಗೊಳಿಸಿ ದ.ಕ ಜಿಲ್ಲೆಯನ್ನು ಬರಡು ಭೂಮಿಯನ್ನಾಗಿಸಲು ನೇತ್ರವತಿ ತಿರುವು ಯೋಜನೆಗೆ ಚಾಲನೆ ನೀಡಿ ಈ ರಾಜ್ಯದ ಜನತೆಯ ಕೋಟ್ಯಾಂತರ ರೂಪಾಯಿ ತೆರಿಗೆ ಹಣವನ್ನು ಕೊಳ್ಳೆ ಹೊಡೆಯಲು ಕರ್ನಾಟಕ ಸರಕಾರದ ಜನ ವಿರೋದಿ ಕಾಂಗ್ರೇಸ್ ಸರಕಾರದ ಈ ಯೋಜನೆಯ ವಿರುದ್ದ ಸಂಸದ ನಳಿನ್ ಕುಮಾರ್ ಕಟೀಲ್ ರವರು ನೇತೃತ್ವದ ಪಕ್ಕಾತೀತ ಹೋರಾಟದ ಪಂಚ ತೀರ್ಥ-ಸಪ್ತಕ್ಷೇತ್ರ ರಥ ಯಾತ್ರೆಗೆ ಭಾನುವಾರ ಪೊಳಲಿಯಿಂದ ಹೊರಟಿತು.

11-vp-polali-theertha-yathre   ಮಧ್ಯಾಹ್ನ 2.30ಕ್ಕೆ ಪೊಳಲಿ ಅಖಿಲೇಶ್ವರ ದೇವಳದ ಹಿಂಭಾಗದ ಪಲ್ಘುಣಿ ನದಿಯಿಂದ ನೀರನ್ನು ಕಳಸದಲ್ಲಿ ತುಂಬಿಸಿ  ಕೊಂಡೊಯ್ದು ಜಲ ಮತ್ತು ಪುಣ್ಯ ನೆಲದ ರಕ್ಷಣೆಯ ಜಾಗೃತಿಗಾಗಿ ತೀರ್ಥ-ಕಲಶ ಯಾತ್ರೆಗೆ .2

1

3

4

ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ,ವೆಂಕಟೇಶ್ ನಾವಡ ಪೊಳಲಿ, ದೇವಪ್ಪ ಪೂಜಾರಿ ಬಾಳಿಕೆ,  ತಾ. ಪಂ ಸದಸ್ಯ ಯಶವಂತ ಪೂಜಾರಿ ಪೊಳಲಿ, ಕರಿಯಂಗಳ ಗ್ರಾ. ಪಂ ಅಧ್ಯಕ್ಷೆ ಚಂದ್ರಾವತಿ, ಅಮ್ಮುಂಜೆ ಗ್ರಾ. ಪಂ ಅಧ್ಯಕ್ಷೆ ಪ್ರೇಮ,  ಚಂದ್ರಶೇಖರ ರಾವ್ , ರಮೇಶ್ ಪೂಜಾರಿ ಬಟ್ಟಾಜೆ, ಜನಾರ್ಧನ ಬಾರಿಂಜೆ, ತಿರುಲೇಶ್, ತಿರುಮಲೇಶ್ ತೆಂಕಬೆಳ್ಳೂರು , ಚಂದ್ರಶೇಖರ ಶೆಟ್ಟಿಬಡಕಬೈಲು , ಸುಕೇಶ್‍ಚೌಟ ಬಡಕಬೈಲು, ಗೋಪಾಲ ಬಂಗೇರಾ ಕರಿಯಂಗಳ, ಯಶೋಧರ ಕಲ್ಕುಟ, ಸುರೇಶ್ ಮಣಿಕಂಠಪುರ ಲೋಕೇಶ್ ಭರಣಿ ಹಾಗೂ ನೂರಾರು ವಾಹನಗಳೊಂದಿಗೆ ಪೊಳಲಿ ,ಕರಿಯಂಗಳ,ಅಮ್ಮುಂಜೆ ಬಡಗಬೆಳ್ಳೂರು ಈ ಭಾಗದ ಜನರು ಮೆರವಣಿಗೆಯಲ್ಲಿ  ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

By Suddi9

Leave a Reply

Your email address will not be published. Required fields are marked *