ಬಂಟ್ವಾಳ: ತಾಲ್ಲೂಕಿನ ಕೊಯಿಲ ಸಮೀಪದ ಹೋರಂಗಳ ಶ್ರೀರಾಮ ನಗರ ನಿವಾಸಿ, ನಿವೃತ್ತ ಮುಖ್ಯಶಿಕ್ಷಕ ಎಂ.ಗೋಪಾಲ ಭಟ್ (81) ಇವರು ಅಸೌಖ್ಯದಿಂದ ಶನಿವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ ಮತ್ತು ನಾಲ್ವರು ಪುತ್ರರು ಇದ್ದಾರೆ. ಇಲ್ಲಿನ ಕೊಯಿಲ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 25 ವರ್ಷಗಳಲ್ಲಿ ಶಿಕ್ಷಕರಾಗಿ ಬಳಿಕ ಮುಖ್ಯಶಿಕ್ಷಕರಾಗಿ ದುಡಿದು ನಿವೃತ್ತಿಯಾಗಿದ್ದರು. ಆರಂಭದಲ್ಲಿ ಸ್ಥಳೀಯ ಕುಟ್ಟಿಕಳ-ಕರ್ಪೆ ಸಹಿತ ಮಳಲಿ, ಅಶ್ವತ್ಥಪುರ, ಕಲ್ಲಮುಂಡ್ಕೂರು ಮತ್ತಿತರ ಶಾಲೆಗಳಲ್ಲಿ ಶಿಕ್ಷಕರಾಗಿದ್ದ ಇವರು ಬಳಿಕ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿಯೂ ದುಡಿದಿದ್ದರು.

