ಬಂಟ್ವಾಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕೃಷಿಕರು ಮತ್ತು ಮಹಿಳೆಯರ ಸ್ವಾವಲಂಬನೆ ಜೊತೆಗೆ ಗ್ರಾಮೀಣಾಭಿವೃದ್ಧಿಯಿಂದ ಒಟ್ಟು ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಾಲ್ಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಎನ್.ಪ್ರಕಾಶ ಕಾರಂತ ಹೇಳಿದ್ದಾರೆ. ಬಂಟ್ವಾಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವತಿಯಿಂದ ಸೋಮವಾರ ನಡೆದ ಪದಗ್ರಹಣ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

yojane

ಯೋಜನೆ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರಾವಳಿ ಜಿಲ್ಲೆಗಳ ಪ್ರಗತಿ ಬಂಧು ಯೋಜನೆಗಳು ಉಳಿದ ಜಿಲ್ಲೆಗಳಿಗೆ ಪ್ರೇರಕವಾಗಿವೆ ಎಂದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶಯದಂತೆ ತಾಲ್ಲೂಕಿನಲ್ಲಿ ಕಳೆದ 12 ವರ್ಷಗಳಿಂದ ಯೋಜನೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

ಈಗಾಗಲೇ ಸ್ವಸಹಾಯ ಸಂಘಗಳ ಸದಸ್ಯರಿಗೆ ಒಟ್ಟು ರೂ 5.65 ಕೋಟಿ ಮೊತ್ತದ ಲಾಭಾಂಶ ವಿತರಿಸಲಾಗಿದ್ದು, ಇಲ್ಲಿನ ಒಟ್ಟು 3,384 ಮಂದಿ ಸದಸ್ಯರು ರೂ 544.02 ಕೊಟಿ ಮೊತ್ತದ ವ್ಯವಹಾರ ನಡೆಸಿ ರೂ 19. 28 ಕೋಟಿ ಮೊತ್ತ ಉಳಿತಾಯ ಮಾಡಿದ್ದಾರೆ ಎಂದು ತಿಳಿಸಿದರು.

ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ಜಿಲ್ಲೆಯಲ್ಲಿ ಭೂ ಸುಧಾರಣಾ ಕಾನೂನು ಯಶಸ್ವಿಯಾಗಿ ಜಾರಿಗೊಂಡು ಬಳಿಕ ಧರ್ಮಸ್ಥಳ ಯೋಜನೆ ಮೂಲಕ ದುಶ್ಚಟಮುಕ್ತರಾಗಿ ಕೃಷಿಕರು ಅಭಿವೃದ್ದಿ ಹೊಂದಿದ್ದಾರೆಎಂದರು.

ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಮಾತನಾಡಿ, ಪುರಸಭಾ ವ್ಯಾಪ್ತಿಯಲ್ಲಿ ಭೂಪರಿವರ್ತನೆಗೊಳ್ಳದ ಕೃಷಿ ಜಮೀನು ಅಭಿವೃದ್ಧಿಗೆ ರೂ 2.70ಲಕ್ಷ ಮೊತ್ತದ ಸಹಾಯಧನ ನೀಡಲಾಗುವುದು ಎಂದರು.

ನೂತನ ಅಧ್ಯಕ್ಷ ಸದಾನಂದ ಗೌಡ, ನಿಟಕಪೂರ್ವ ಅಧ್ಯಕ್ಷ ಚಂದಪ್ಪ ಮೂಲ್ಯ ಅನುಭವ ಹಂಚಿಕೊಂಡರು. ನಿರ್ದೇಶಕ ಚಂದ್ರಶೇಖರ ನೆಲ್ಯಾಡಿ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಎ. ರುಕ್ಮಯ ಪೂಜಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ ಮತ್ತಿತರರು ಇದ್ದರು. ಮೇಲ್ವಿಚಾರಕಿ ನಳಿನಾಕ್ಷಿ ಸ್ವಾಗತಿಸಿ, ಯೋಜನಾಧಿಕಾರಿ ಸುನಿತಾ ನಾಯಕ್ ವರದಿ ವಾಚಿಸಿದರು. ಕೃಷಿ ಅಧಿಕಾರಿ ನಾರಾಯಣ ವಂದಿಸಿ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಜಯಂತಿ ಮತ್ತು ಮೇಲ್ವಿಚಾರಕ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *