ಮೂಡುಬಿದಿರೆ: ಸಂಪ್ರದಾಯ- ಅಧುನಿಕತೆಗೆ ಸ್ಪಂದಿಸಿರುವ ಮಾಸ್ತಿಯವರು ಸಮಾಜ ಪರಿವರ್ತನೆಗಿಂತ ಶಾಶ್ವತ ಮೌಲ್ಯಗಳನ್ನು ಹೆಚ್ಚು ನಂಬಿದವರು. ಅವರ ಸಾಹಿತ್ಯಗಳಲ್ಲಿ ಶಾಶ್ವತ ಮೌಲ್ಯಗಳಿಗೆ ಹೆಚ್ಚಿನ ಪ್ರದಾನ್ಯತೆ ನೀಡಿದ್ದಾರೆ ಎಂದು ಡಾ.ಜಿ.ಎಂ ಹೆಗಡೆ ಹೇಳಿದರು. ಆಳ್ವಾಸ್ ನುಡಿಸಿರಿಯಲ್ಲಿ ಹಿರಿಯರ ಸ್ಮರಣೆ ಕಾರ್ಯಕ್ರಮದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಹಾಗೂ ಅವರ ಸಾಹಿತ್ಯ ಕೊಡುಗೆಗಳನ್ನು ಹೆಗಡೆ ನೆನಪಿಸಿಕೊಂಡರು. 
8-3

ಬಡತನದಲ್ಲಿರುವ ಸಾಹಿತಿಗಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ದೊಡ್ಡತನ ಮಾಸ್ತಿಯವರಲ್ಲಿತ್ತು. ಅವರು ಮಹಿಳಾ ಸಾಹಿತ್ಯವನ್ನು ಕೂಡ ಅವರು ಪ್ರೋತ್ಸಾಹಿಸಿದ್ದಾರೆ. ಸ್ತ್ರೀ ವಾದಿ ಚಿಂತನೆಯನ್ನು ಹೊಂದಿದ್ದ ಅವರು, ಸ್ತ್ರೀಯನ್ನು ಏಕಮುಖಿಯಾಗಿ ಬಿಂಬಿಸದೆ, ಬಹುಮುಖಿಯಾಗಿ ಗುರುತಿಸುವಂತೆ ತಮ್ಮ ಸಾಹಿತ್ಯದಲ್ಲಿ ಮಾಡಿದರು. ಸ್ತೀಯಲ್ಲಿರುವ ಸಾಮಥ್ರ್ಯ, ಪ್ರಬುದ್ಧತೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂದರು.

8-2

ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಬಿ.ಎನ್ ಸುಮಿತ್ರಾ ಬಾಯಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಡಾ.ನಾ.ದಾ ಶೆಟ್ಟಿ ಉಪಸ್ಥಿತರಿದ್ದರು.  ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *