ವಿಟ್ಲ: ವಿಠಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ” ವಿನೂತನ ಶುದ್ಧ ತಿಂಡಿ ತಿನಿಸುಗಳ ಕಯ್ರ-ವಿಕ್ರಯ ಮೇಳ”ಕಾರ್ಯಕ್ರಮ ನ. 17ರಂದು ಜರುಗಿತು. ಕಮಲಾ ಕೆ ಭಟ್ ಸಮಾರಂಭವನ್ನು ಉದ್ಘಾಟಿಸಿ ಚಾಲನೆ ನೀಡಿದರು.



ವಿಟ್ಲ ವಿಠಲ ಜೇಸೀಸ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಎಲ್.ಎನ್. ಕೂಡೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ವಿಟ್ಲ ವಿಠಲ ಜೇಸೀಸ್ ಎಜ್ಯುಕೇಶನ್ ಸೊಸೈಟಿಯ ಸರ್ವಸದಸ್ಯರು, ವಿಟ್ಲ ವಿಠಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ಹಾಗೂ ವಿದ್ಯಾರ್ಥಿಗಳು ಮತ್ತು ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಹಲವು ರೀತಿಯ ಬಗೆ ಬಗೆ ತಿಂಡಿ ತಿನಿಸುಗಳನ್ನು ಪ್ರದರ್ಶಿಸಲಾಯಿತು.







