ಮೂಡುಬಿದಿರೆ: ನವಂಬರ್ 18ರಿಂದ 20ರ ವರೆಗೆ ಮೂಡಬಿದಿರೆಯಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿಯ ಅಂಗವಾಗಿ ಕನ್ನಡ ರಂಗಭೂಮಿಯ ನಾಲ್ಕು ಪ್ರಮುಖ ನಾಟಕಗಳ ಪ್ರದರ್ಶನ ರಂಗಸಿರಿಯನ್ನು ಪ್ರತಿದಿನ 6.45ಕ್ಕೆ ವಿದ್ಯಾಗಿರಿಯ ಡಾ.ಶಿವರಾಮಕಾರಂತ ವೇದಿಕೆಯಲ್ಲಿ ಏರ್ಪಡಿಸಲಾಗಿದೆ.

nudisiri

nudisiri-2

ನುಡಿಸಿರಿಯ ಹಿಂದಿನ ದಿನ ನವಂಬರ್ 17ರಂದು ರಂಗಾಯಣ ದಾರವಾಢ ಅಭಿನಯದ ನಾಟಕ `ತಮಾಶಾ’ (ನಿರ್ದೇಶನ:ಪ್ರೊ:ಗಣೇಶಚಂದಶಿವೆ, ಮುಂಬಯಿ), ನ.18ರಂದು ರಂಗಾಯಣ, ಮೈಸೂರು ಅಭಿನಯಿಸುವ ಡಾ.ಗಿರೀಶ್ ಕಾರ್ನಾಡ್ ರಚಿಸಿರುವ ನಾಟಕ`ತಲೆದಂಡ‘(ನಿ: ಜಯತೀರ್ಥ ಜೋಶಿ) ನ.19ರಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರ) ಅಭಿನಯದ ಡಾ.ಚಂದ್ರಶೇಖರ ಕಂಬಾರ ರಚಿಸಿರುವ ಜಾನಪದ ನಾಟಕ `ಮಹಾಮಾಯಿ‘(ನಿರ್ದೇಶನ:ಜೀವನ್‍ರಾಂ ಸುಳ್ಯ) ಮತ್ತು ನ.20ರಂದು ರಂಗಮಂಟಪ, ಬೆಂಗಳೂರು ಅಭಿನಯಿಸುವ ವೈದೇಹಿ ಕಥೆಯಾಧಾರಿತ ನಾಟಕ `ಅಕ್ಕು‘ (ರಚನೆ:ಕಾಶೀನಾಥ್ ಪತ್ತಾರ್, ನಿ:ಚಂಪಾಶೆಟ್ಟಿ) ಪ್ರದರ್ಶನಗೊಳ್ಳಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *