ಬಜಪೆ: ನಮ್ಮ ಗ್ರಾಮದ ಕ್ರೀಡಾ ಪಟುಗಳು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ. ಗ್ರಾಮೀಣ ಪಟ್ಟದಲ್ಲಿ ನಡೆಯುವಂತಾ ಇಂತಹ ಕ್ರೀಡಾ ಕೂಟವು ಗ್ರಾಮದ ಜನತೆಯಲ್ಲಿ ಕ್ರೀಡಾ ಮನೋಭಾವ ರೂಪಿಸುವಂತಾಗಲೀ ಎಂದು ಕ್ರೀಡಾಕೂಟವನ್ನು ಉದ್ಘಾಟಿಸಿ, ರೂಪೇಶ್ ಕುಮಾರ್ ಅದ್ಯಪಾಡಿ ಅವರು ಸುಂಕದಕಟ್ಟೆ ಕೊಳಂಬೆಯಲ್ಲಿ ಹೇಳಿದರು.

kreede

k-3

ಗ್ರಾಮ ಮಟ್ಟದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಳಂಬೆ ಹಳೆ ವಿದ್ಯಾರ್ಥಿ ಸಂಘ ಮಾಡಿರುವ ಕಾರ್ಯ ಶ್ಲಾಘನೀಯ ಇದೇ ರೀತಿ ಪ್ರತಿಯೊಂದು ಗ್ರಾಮದಲ್ಲಿ ಸಂಘ ಸಂಸ್ಥೆಗಳು ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಲಿ ಎಂದು ಕ್ರೀಡಾಕೂಟ ಸಮಾರೋಪ ಸಮಾರಂಭದ ಅಧ್ಯಕ್ಷರಾದ ಯು.ಪಿ ಇಬ್ರಾಹಿಂ ಹೇಳಿದರು.

kreede-2

k-6

ಇದೇ ಸಂದರ್ಭ ಎಸ್ಎಸ್ಎಲ್ ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಕು. ತುಷರ ವೈ.ರೈ ಇವರನ್ನು ಸನ್ಮಾನಿಸಲಾಯಿತು. ಈ ಕ್ರೀಡಾಕೂಟದ ಹಳ್ಳಿ ಓಟದಲ್ಲಿ ಚೇತನ್ ಕೊಳಂಬೆ ಪ್ರಥಮ, ಶೇಖರ ಕೊಳಂಬೆ ದ್ವಿತೀಯ, ಕಬಡ್ಡಿ ಕಿರಿಯರ ವಿಭಾಗದಲ್ಲಿ ಕೊಳಂಬೆ ಫ್ರೆಂಡ್ಸ್ ಕೊಳಂಬೆ ಪ್ರಥಮ, ಕಟಿಲೇಶ್ವರೀ ಫ್ರೆಂಡ್ಸ್ ಕ್ಲಬ್ ದ್ವಿತೀಯ, ಕಬಡ್ಡಿ ಹಿರಿಯರ ವಿಭಾಗ- ದುರ್ಗಾ ಫ್ರೆಂಡ್ಸ್ ಕೊಳಂಬೆ ಬಿ ಪ್ರಥಮ, ದುರ್ಗಾ ಫ್ರೆಂಡ್ಸ್ ಕೊಳಂಬೆ ಎ ದ್ವಿತೀಯ.

k-4

ಈ ಸಂದರ್ಭ ವೇದಿಕೆಯಲ್ಲಿ  ಗ್ರಾ. ಪಂ ಅಧ್ಯಕ್ಷ ವಿಜಯ ಗೋಪಾಲ ಸುವರ್ಣ , ಮಾಜಿ ತಾ.ಪಂ ಸದಸ್ಯ ಕೇಶ ಭಂಡಾರಿ, ಪಂ. ಸದಸ್ಯ ಆಶ್ರಫ್, ಕಂದಾವರ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ರವೀಂದ್ರ ಕುಲಾಲ್, ಚಂದಪ್ಪ ಕೊಳಂಬೆ ಸ್ವಾಗತಿಸಿದರು, ಜಯಂತ ಕೊಳಂಬೆ ಧನ್ಯವಾದ ಗೈದರು. ಧನ್ಯಶ್ರೀ ರೈ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *