ಮೂಡುಬಿದಿರೆ: ರಾಜ್ಯ ಸರ್ಕಾರ ದ.ಕ. ಜಿಲ್ಲೆಯ 200 ಹಿಂದೂ ಸಂಘಟನೆಯ ನಾಯಕರಿಗೆ, ವಕೀಲರಿಗೆ ಟಿಪ್ಪು ಜಯಂತಿ ಆಚರಣೆಗೆ ಅಡ್ಡಿಪಡಿಸುವುದಿಲ್ಲವೆಂದು ತಲಾ 10.ಲಕ್ಷ ರೂಗಳ ಮುಚ್ಚಳಿಗೆ ಬಾಂಡ್ ಬರೆದುಕೊಡಲು ನೋಟೀಸು ನೀಡಿರುವುದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಎಂ.ಗೋಪಾಲಕೃಷ್ಣ ಮಲ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜೆಗಳಿಗೆ ಸಂವಿಧಾನಬದ್ಧವಾಗಿ ನೀಡಿದ ಹಕ್ಕಿನ ಮೇಲಿನ ರಾಜ್ಯ ಸರ್ಕಾರದ ಗಧಾಪ್ರಹಾರವಾಗಿದೆ ಮತ್ತು ಕಾನೂನು ಬಾಹಿರವೂ ಆಗಿದೆ. ಇದೇ ರೀತಿ ಮುಚ್ಚಳಿಕೆಯನ್ನು ಪೊಲೀಸರು ಹಿಂದೂ ನಾಯಕರ ಹತ್ಯೆಯ ಆರೋಪವಿರುವ ಪಿಎಫ್‍ಐ, ಕೆಎಫ್‍ಡಿ ಮುಂತಾದ ಜಿಹಾದಿ ಸಂಘಟನೆಗಳಿಂದ, ಹಿಂದೂ ಸಂಘಟನೆಗಳು ಸಮಾಜೋತ್ಸವ ಮಾಡುವಾಗ ಬರೆಸಿಕೊಳ್ಳುವುದೇ?. ಕೊಲೆಯಗುತ್ತಿರುವುದು ಹಿಂದೂ ನಾಯಕರು. ಮುಚ್ಚಳಿಕೆ ಬರೆಸಿಕೊಳ್ಳುತ್ತಿರುವುದೂ ಹಿಂದೂ ನಾಯಕರಿಂದ. ರಾಜ್ಯದಲ್ಲಿ ಇಸ್ಲಾಮಿಕ್ ಜಿಹಾದಿಗಳು ಮಾಡುತ್ತಿರುವ ಹಿಂದೂ ನಾಯಕರ ಹತ್ಯೆಗಳಿಂದ ಹಿಂದೂ ಸಮಾಜವು ನಲುಗಿ ಹೋಗಿದೆ.

ಬೆಂಗಳೂರು ಉಚ್ಛ ನ್ಯಾಯಲಯ ಸೇರಿದಂತೆ ಅನೇಕ ಇತಿಹಾಸಕಾರರು ಟಿಪ್ಪು ಜಯಂತಿ ಆಚರಣೆಯ ವಿಷಯದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ರಾಜ್ಯ ಸರಕಾರವು ಅಲ್ಪಸಂಖ್ಯಾತರನ್ನು ಓಲೈಸಲು ರಾಜ್ಯದ ಹಿಂದೂ ಸಮಾಜವನ್ನು ಬಲಿಪಶು ಮಾಡಿ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವುದು ಮಾತ್ರವಲ್ಲದೆ ಅದಕ್ಕಾಗಿ ಮುಚ್ಚಳಿಕೆ ಬರೆಸಿಕೊಳ್ಳುತ್ತಿರುವುದು ಅತ್ಯಂತ ಖಂಡನೀಯ ಎಂದು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *