ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಮಿಜಾರಿನಲ್ಲಿ ಸಂಯೋಜಿಸಿದ್ದ ವರಿಷ್ಠ ಕ್ರೀಡಾಕೂಟವನ್ನು ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಆಧುನಿಕ ಕ್ರೀಡೆಯ ಜೊತೆಗೆ ವರಿಷ್ಠ ಕ್ರೀಡಾಕೂಟ ಆಯೋಜಿಸುವ ಮೂಲಕ ಆಳ್ವಾಸ್ ಸಂಸ್ಥೆ ಜಾನಪದ ಕ್ರೀಡೆಗೂ ಪ್ರೋತ್ಸಾಹ ನೀಡುತ್ತಿರುವುದು ಗ್ರಾಮೀಣ ಜಾನಪದ ಕ್ರೀಡೆಗಳನ್ನು ಉಳಿಸಿ ಬೆಳೆಸುವುದಕ್ಕೆ ದಿಟ್ಟ ಹೆಜ್ಜೆ ಎಂದರು.

ಪ್ರಾಂಶುಪಾಲರಾದ ಡಾ.ಪೀಟರ್ ಫರ್ನಾಂಡಿಸ್ ಮಾತನಾಡಿ ವಿಜ್ಞಾನ ಮತ್ತು ತಂತ್ರಜ್ಞಾನದ ಭರಾಟೆಯಲ್ಲಿ ಜಾನಪದ ಕ್ರೀಡೆಗಳು ಮರೆಯಾಗುತ್ತಿರುವುದು ಬಹಳ ಆತಂಕಕಾರಿ ಬೆಳೆವಣಿಗೆ ಎಂದರು. ಕೊತ್ತಲಿಗೆ ಕ್ರಿಕೆಟ್, ಕುಟ್ಟಿದೊಣ್ಣೆ, ಲಗೋರಿ, ಕಬ್ಬಡ್ಡಿ, ಲೆಮನ್ ರೇಸ್, ಚೌಕಬಾರ, ಕುಂಟೆಬಿಲ್ಲೆ ಮುಂತಾದ ಜಾನಪದ ಕ್ರೀಡೆಗಳ ಸ್ಪರ್ಧೆಗಳನ್ನು ನಡೆಸಲಾಯಿತು. 
ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಶಂಕರಗೌಡ ನ್ಯಾಮಣ್ಣನವರ್, ಸಂಯೋಜಕ ಪ್ರೊ.ಸುರೇಶ್ ಕೆ.ವಿ, ವಿದ್ಯಾರ್ಥಿ ಸಂಯೋಜಕ ಪವನ್ ಕುಮಾರ್, ಸಂದೇಶ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
