ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಕರ್ದಬೆಟ್ಟು ನಿವಾಸಿ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುನೀತ್ ಸಾಲ್ಯಾನ್ ಚಿಕಿತ್ಸೆಗೆ ಮುಂಬೈ ಶ್ರೀ ರಜಕ ಸಂಘದ ರೂ.2 ಲಕ್ಷ ಸಹಾಯಧನ ಹಸ್ತಾಂತರಿಸಲಾಯಿತು.
ಸಂಘದ ವಸಾಯಿ ವಿಭಾಗದ ಅಧ್ಯಕ್ಷ ರಮೇಶ್ ಫಲಿಮಾರ್, ಮಾಜಿ ಅಧ್ಯಕ್ಷ, ದಾನಿ ದೇವೇಂದ್ರ ಬುನ್ನಾನ್, ಕಾರ್ಯದರ್ಶಿ ವಸಂತ ಬುನ್ನಾನ್, ಕಾರ್ಯಕಾರಿ ಸಮಿತಿ ಸದಸ್ಯ ಶೇಖರ ಸಾಲ್ಯಾನ್, ಸದಸ್ಯ ರೂಪೇಶ್ ಪುತ್ರನ್ ಉಪಸ್ಥಿತರಿದ್ದರು. ಹೆಚ್ಚುವರಿ 1 ಲಕ್ಷ ರೂ. ಮೊತ್ತವನ್ನು ಉಳಿದ ಚಿಕಿತ್ಸೆಗೆ ಬಿಡುಗಡೆ ಮಾಡುವುದೆಂದು ಸಂಘದ ಅಧ್ಯಕ್ಷ ಸತೀಶ್ ಸಾಲ್ಯಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

