ಮೂಡುಬಿದಿರೆ: ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮೂಡುಬಿದಿರೆಯ 75 ಫಲಾನುಭವಿಗಳಿಗೆ ವೈಯಕ್ತಿಕ ನೆಲೆಯಲ್ಲಿ 75 ದನಗಳನ್ನು ದೀಪಾವಳಿ ಗೋಪೂಜೆಯಂದು ನೀಡಲಾಗುವುದು ಎಂದು ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.
ಮೂಡುಬಿದಿರೆ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾಧ್ಯಮದವರಿಗೆ ಅವರು ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯರ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದ್ದೇವೆ. ಸ್ಥಳೀಯ ತಳಿಯ ಹಾಲು ಕೊಡುವ ದನಗಳನ್ನು ದೀಪಾವಳಿಯ ಗೋಪೂಜೆ ನಡೆಸಿ, ಫಲಾನುಭವಿಗಳಿಗೆ ನೀಡಲಾಗುವುದು. ಗೋಶಾಲೆಗಳಲ್ಲಿ ಸಾಕಲು ಕಷ್ಟವಾಗಿರುವ ಗೋವುಗಳನ್ನು ಖರೀದಿಸಿ ನೀಡಲು ಆದ್ಯತೆ ನೀಡಲಾಗುವುದು ಎಂದರು.

