ಬಂಟ್ವಾಳ: ತಾಲ್ಲೂಕಿನ ಪಂಜಿಕಲ್ಲು ಎಂಬಲ್ಲಿನ ಕಾರು ಚಾಲಕರೊಬ್ಬರನ್ನು ಎಂಟು ಮಂದಿ ತಂಡವೊಂದು ಏಕಾಯೇಕಿ ಕಿಡ್ನಾಪ್ ಮಾಡಿ ಬಳಿಕ ಗಂಭೀರ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಇಲ್ಲಿನ ಸಿದ್ಧಕಟ್ಟೆಯಲ್ಲಿ ಭಾನುವಾರ ನಡೆದಿದೆ.

images

ಗಾಯಾಳುವನ್ನು ಪಂಜಿಕಲ್ಲು ಗ್ರಾಮದ ಆಚಾರಿಪಲ್ಕೆ ಸಮೀಪದ ಜೋರ ನಿವಾಸಿ ಸುರೇಶ ಪೂಜಾರಿ ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡ ಇವರನ್ನು ಮಂಗಳೂರು ಸಕರ್ಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸುರೇಶ ಅವರು ಭಾನುವಾರ ಬೆಳಿಗ್ಗೆ ಪಂಜಿಕಲ್ಲು ಮನೆ ಬಳಿ ಕಾರು ಶುಚಿಗೊಳಿಸುತ್ತಿದ್ದ ವೇಳೆ ಎರಡು ಬೈಕ್ ಮತ್ತು ಮಾರುತಿ ಓಮ್ನಿ ಕಾರಿನಲ್ಲಿ ಬಂದಿದ್ದ ಎಂಟು ಮಂದಿ ತಂಡವು ಅವರನ್ನು ಎಳೆದು ಕಾರಿನಲ್ಲಿ ಕೂಡಿ ಹಾಕಿ ಸಿದ್ಧಕಟ್ಟೆಗೆ ಕೊಂಡೊಯ್ದಿದೆ ಎನ್ನಲಾಗಿದೆ.

ಸಿದ್ಧಕಟ್ಟೆ ತ್ಯಾಜ್ಯ ಸಂಸ್ಕರಣಾ ಘಟಕ ಸಮೀಪದ ನಿರ್ಜನ ರಸ್ತೆಯಲ್ಲಿ ಕರೆದುಕೊಂಡು ಹೋಗಿ ಬಳಿಕ ಕೈ ಮತ್ತು ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಪರಾರಿಯಾಗಿದ್ದಾರೆ. ಇವರ ನಡುವೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಆರೋಪಿ ಸ್ಥಳೀಯ ನಿವಾಸಿ ರಜನೀಶ್ ಮತ್ತಿತರ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಿಸಿ ಅವರ ಹುಡುಕಾಟ ಕಾರ್ಯ ನಡೆಯುತ್ತಿದೆ ಎಂದು ಬಮಟ್ವಾಳ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *