ಬಂಟ್ವಾಳ: ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಸಹಯೋಗದಲ್ಲಿ, ಬೊಳುವಾರಿನ ಮಧುರ ಮನಸು ಯಕ್ಷಸೇವಾ ಬಳಗದ ಬಾಲಿಕೆಯರ ತಂಡದಿಂದ “ಮಹಿಷಮರ್ದಿನಿ “ ತಾಳಮದ್ದಳೆಯು ಒಕ್ಟೋಬರ್ 10 ರಂದು ಕೇನ್ಯ ದುರ್ಗಾಪರಮೇಶ್ವರಿ ದೇಗುಲದ ನವರಾತ್ರಿ ಮಹೋತ್ಸವದಲ್ಲಿ ಜರುಗಿತು.

img_20161010_195222

ಆರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಯುತ ಗಿರಿನಾಥ ಶೆಟ್ಟಿ ಕೇನ್ಯಗುತ್ತು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಭಾಸ್ಕರ ಶೆಟ್ಟಿಯವರು ‘ಚಂದ್ರನಲ್ಲಿರುವ ಕಲೆಯನ್ನು ಗಮನಿಸದೆ ಬೆಳದಿಂಗಳನ್ನು ಗಮನಿಸುವಂತೆ ಎಳೆಯಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸ ಬೇಕಾಗಿದೆ’ಎಂದರು.

img_20161010_192536

ಶ್ರೀ ಹರಿಪ್ರಸಾದ ದಾಳಿಂಬ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಶ್ರೀಮತಿ ಅರ್ಚನಾ ಭಟ್ ಕೋಟೆ ಧನ್ಯವಾದವನ್ನಿತ್ತರು. ಶ್ರೀಮತಿ ಕವಿತಾ ಅಡೂರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಚಂದ್ರಶೇಖರ ಭಟ್ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ತಾಳಮದ್ದಳೆಯಲ್ಲಿ ಶ್ರೀ ಗೋವಿಂದ ನಾಯಕ ಪಾಲೆಚ್ಚಾರ್, ಮುರಳೀಧರ ಕಲ್ಲೂರಾಯ, ಟಿ ಡಿ ಗೋಪಾಲಕೃಷ್ಣ ಭಟ್, ವಳಕುಂಜ ಕುಮಾರ ಸುಬ್ರಹ್ಮಣ್ಯ ಮತ್ತು ಅಚಿಂತ್ಯ ಕೃಷ್ಣ(8ನೇ,ವಿವೇಕಾನಂದ ಶಾಲೆ) ಹಿಮ್ಮೇಳದಲ್ಲಿ ಸಹಕರಿಸಿದರು. ಮುಮ್ಮೇಳದಲ್ಲಿ ಕೃಪಾಲಿ(10ನೇ,ವಿವೇಕಾನಂದ ಶಾಲೆ) (ಮಾಲಿನಿ ಮತ್ತು ಶಿವ ), ವೈಷ್ಣವಿ ಜೆ ರಾವ್ (10ನೇ,ವಿವೇಕಾನಂದ ಶಾಲೆ)(ದಿತಿ, ವಿಷ್ಣು), ಪ್ರಣಮ್ಯ ಪಾಲೆಚ್ಚಾರ್(7ನೇ,ವಿವೇಕಾನಂದ ಶಾಲೆ)(ದೇವಿ,ದೂತ), ಅಭಿಜ್ಞಾ ಕೆ ಸಿ(8ನೇ ಸುದಾನ ಶಾಲೆ)( ಸುಪಾಶ್ರ್ವಕ,ಮಹಿಷಾಸುರ),ಮೇಧಾ ಭಟ್ ಕೋಟೆ(6ನೇ ಸುದಾನ ಶಾಲೆ)(ದೇವೇಂದ್ರ)ಆಭಿಜ್ಞಾ ರಾವ್(7ನೇ ಸುದಾನ ಶಾಲೆ)(ಅಗ್ನಿ,ಬ್ರಹ್ಮ). ನಿರ್ದೇಶನ ಶ್ರೀ ಭಾಸ್ಕರ ಶೆಟ್ಟಿ. ಆಡಳಿತ ಮುಕ್ತೇಸರರಾದ ಶ್ರೀ ಗಿರಿನಾಥ ಶೆಟ್ಟಿ ಕೇನ್ಯಗುತ್ತುರವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

By Suddi9

Leave a Reply

Your email address will not be published. Required fields are marked *