ಬಂಟ್ವಾಳ: ಪ್ರಕೃತಿಯಲ್ಲೇ ದೇವರನ್ನು ಕಾಣುವ ಮೂಲ ನಂಬಿಕೆ ಹೊಂದಿರುವ ಭಾರತೀಯರು ಆಧ್ಯಾತ್ಮ ಮತ್ತು ಧಾರ್ಮಿಕ ನಂಬಿಕೆಯೊಂದಿಗೆ ಮುನ್ನಡೆಯುತ್ತಿದ್ದಾರೆ. ಇದರಿಂದಾಗಿ ಹಲವು ಹೆಸರು ಮತ್ತು ಪೂಜಾ ವೈಶಿಷ್ಟ್ಯತೆ ಮೂಲಕ ದೇವರನ್ನು ಆರಾಧಿಸಿಕೊಂಡು ಮೂಢನಂಬಿಕೆ ಎನ್ನುವವರಿಗೂ ಒಳಿತನ್ನು ಬಯಸುವ ಹಿಂದೂ ಧರ್ಮದ ಬಗ್ಗೆ ಜಗತ್ತು ಕೂಡಾ ಆಕರ್ಷಿತವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ತಾಲ್ಲೂಕಿನ ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಮತ್ತು ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನ ಬಳಿ ಮಂಗಳವಾರ ನಡೆದ 14ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಅನುವಂಶಿಕ ಮೊಕ್ತೇಸರ ಅನಂತಪದ್ಮನಾಭ ಅಸ್ರಣ್ಣ ಆಶೀರ್ವಚನ ನೀಡಿ, ನಾವು ಧರ್ಮವನ್ನು ರಕ್ಷಣೆ ಮಾಡಿದಾಗ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂಬುದು ಭಾರತೀಯರ ನಂಬಿಕೆಯಾಗಿದೆ ಎಂದರು.
ಎಬಿವಿಪಿ ರಾಜ್ಯ ಉಪಾಧ್ಯಕ್ಷ, ಉಪನ್ಯಾಸಕ ಕೇಶವ ಬಂಗೇರ ಉಜಿರೆ ಪ್ರಧಾನ ಭಾಷಣ ಮಾತನಾಡಿದರು. ಧರ್ಮ ಜಾಗೃತಿ ಎಂಬುದು ರಾಷ್ಟ್ರ ಜಾಗೃತಿಯಾಗಿದ್ದು, ರಾಷ್ಟ್ರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು. ಇದೇ ವೇಳೆ ಪ್ರತಿಭಾನ್ವಿತ ಕಲಾವಿದರಾದ ಅದ್ವಿಕಾ ಶೆಟ್ಟಿ, ರಾಶಿ ರಾಜೇಶ್ ಶೆಟ್ಟಿ, ಸುಜೇತಾ, ರಕ್ಷಿತಾ ಇವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ಜಗದೀಶ್ ಅಧಿಕಾರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಂಗಬೆಟ್ಟು ಜಿಲ್ಲಾ ಪಂಚಾಯತಿ ಸದಸ್ಯ ಎಂ.ತುಂಗಪ್ಪ ಬಂಗೇರ, ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಅರಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಂಗಮ್ಮ, ಸಮಿತಿ ಅಧ್ಯಕ್ಷ ಸವಿನ್ ಕುಮಾನ್ ಜೈನ್, ಗೌರವಾಧ್ಯಕ್ಷ ರಾಜೇಶ್ ನಾೈಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಅಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ಲಯನ್ಸ್ ಎಂಜೆಎಫ್ ಡಾ.ಗೀತಾ ಪ್ರಕಾಶ್, ದಕ್ಷಿಣ ವಲಯ ರೈಲ್ವೆ ಸಲಹಾ ಸಮಿತಿ ಸದಸ್ಯ ಕೆ.ಚಂದ್ರಹಾಸ ಅಡ್ಯಂತಾಯ, ಲಯನ್ಸ್ ಕ್ಲಬ್ ಕಾರ್ಯದರ್ಶಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಅನಿಲ್ ದಾಸ್, ಉದ್ಯಮಿ ಪ್ರಸಾದ್ ರೈ, ಎಂ.ದೇವಪ್ಪ ಶೆಟ್ಟಿ, ರಾಜೇಶ್ ಶೆಟ್ಟಿ ಶೀತಾಳ ಮತ್ತಿತರರು ಉಪಸ್ಥಿತರಿದ್ದರು. ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ ಸ್ವಾಗತಿಸಿ, ಪ್ರಧಾನ ಕಾಯದರ್ಶಿ ಡೊಂಬಯ ಬಿ.ಅರಳ ವಂದಿಸಿದರು. ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

