ಬಜಪೆ:“ದೇಗುಳಗಳು ಅಭಿವೃದ್ಧಿಯಾದರೆ ಗ್ರಾಮಕ್ಕೆ ಸಕರಾತ್ಮಕ ಬೆಳವಣಿಗೆಯ ಸಂಕೇತ ಸಾಮಾಜಿಕ ಪಾಲ್ಗೋಳ್ಳುವಿಕೆ, ಮೂಲ ಸೌಕರ್ಯಗಳ ಅಭಿವೃದ್ಧಿ ಬಗೆಗೂ ಇಲ್ಲಿ ಚಿಂತನೆಗಳು ಆಗಬೇಕಿದೆ. ಧರ್ಮಜಾಗೃತಿ ಹಾಗೂ ಧಾರ್ಮಿಕ ಪರಿಕಲ್ಪನೆಯ ಚಟುವಟಿಕೆಗಳ ಜತೆಗೆ ಸಾಮಾಜಿಕ ಕಳಕಳಿಯ ಸೇವಾ ಕಾರ್ಯಗಳು ಧಾರ್ಮಿಕ ಕೇಂದ್ರಗಳು ಆದ್ಯತೆ ನೀಡಬೇಕು ಎಂದು ರಾಷ್ಟ್ರೀಯ ಬಿಲ್ಲವ ಮಹಾಮಂಡಳದ ಅಧ್ಯಕ್ಷ ಹಾಗೂ ಭಾರತ್‍ಕೋ-ಅಪ್‍ರೇಟಿವ್ ಬ್ಯಾಂಕ್ ನ ಕಾರ್ಯಧ್ಯಕ್ಷ ಜಯ ಸಿ ಸುವರ್ಣ ಅವರು ಹೇಳಿದರು. ಅವರು ಬಜಪೆ-ದೊಡ್ಡಿಕಟ್ಟೆ ಶ್ರೀ ಸ್ವಯಂಭೂ ಉಮಾಮಹೇಶ್ವರ ದೇವಳದಲ್ಲಿ ದಾನಿಗಳ ನೆರವಿನಿಂದ ನೂತನವಾಗಿ ನಿರ್ಮಾಣಗೊಂಡ ಪಾಕಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು.

9-vp-pakasale

ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಎಲ್.ವಿ.ಅಮೀನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ -ದೇಗುಲದಲ್ಲಿ ನಿರಂತರ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳನ್ನು ನಿರಂತರ ನಡೆಯುವ ಸದುದ್ದೇಶದ ಬಗ್ಗೆ ಇಷ್ಠರಲ್ಲೇ ಆಡಳಿತ ಸಮಿತಿ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಗುವುದು. ಜತೆಗೆ ಮೂಲಸೌಕರ್ಯಗಳ ಅಭಿವೃದ್ಧಿ ರಸ್ತೆ ಕುಡಿಯುವ ನೀರು, ವಾಹನ ಸೌಕರ್ಯ ವ್ಯವಸ್ಥೆಗಳ ಬಗ್ಗೆ ಸ್ಥಳೀಯಾಡಳಿತ ಹಾಗೂ ಜನಪ್ರತಿನಿಗಳ ಸಹಕಾರ ಪಡೆದು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಇದೇ ಸಂದರ್ಭ ಜಯ ಸಿ ಸುವರ್ಣ ಹಾಗೂ ಲೋಕೇಶ್ ಕುಳ್ವಾ ಹಾಗೂ ಅನೂಜ್ ಕುಮಾರ್ ಅವರುಗಳನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಾರಾಯಣ ಉಡುಪ ಹಾಗೂ ವಿಶ್ವನಾಥ ಭಟ್ ಅವರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

ಉದ್ಯಮಿ ಲಕ್ಷ್ಮಣ್ ಶೆಟ್ಟಿ ಕಾವೂರು, ಬಜಪೆ ಗ್ರಾಮ ಪಂಚಾಯತಿ ಸದಸ್ಯರಾದ ಸುರೇಂದ್ರ ಪೆರ್ಗಡೆ, ಸುಧಾಕರ ಕಾಮತ್, ಉದಯ ಕುಮಾರ್, ಬಜಪೆ ವ್ಯವಸಾಯ ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ, ಸುಂದರ ಅಮೀನ್ ದೊಡ್ಡಿಕಟ್ಟ , ವಿನಯ ಶಾಮಾತ, ಕರುಣಾಕರ ಎಂ, ಎನ್. ಎಂ. ಸನೀಲ್, ನೀತೀಶ್ ಪೂಜಾರಿ, ಚಲನಚಿತ್ರ ನಿರ್ದೇಶಕ ರಾಜಶೇಖರ ಕೋಟ್ಯಾನ್, ಗಂಗಾಧರ ಪೂಜಾರಿ, ಚಂದಪ್ಪ ಕುಂದರ್, ಶರತ್ ಸುವರ್ಣ, ಬಜಪೆ ಶ್ರೀ ವಿಜಯ ವಿಠಲ ಭಜನಾ ಮಂದಿರದ ಅಧ್ಯಕ್ಷ ಶಿವರಾಮ್ ಪೂಜಾರಿ, ಸುಕುಮಾರ ಸಾಲ್ಯಾನ್, ಶೇಖರ ಅಮೀನ್, ದೀಪಕ್ ಕೋಟ್ಯಾನ್ ಮಂತಾದವರು ಉಪಸ್ಥಿತರಿದ್ದರು. ರಾಜೀವ್ ಪ್ರತಾಪ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರದ ಗೌರವ ಪ್ರಧಾನ ಕಾರ್ಯದರ್ಶಿ ಗೋಪಾಲ್ ಅಮೀನ್ ಸಹಕರಿಸಿದರು.

By Suddi9

Leave a Reply

Your email address will not be published. Required fields are marked *