ಮೂಡುಬಿದಿರೆ: ಯುವವಾಹಿನಿ ಬೆಳುವಾಯಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಷಣ್ಮುಖಾನಂದ ಸಭಾ ಭವನದಲ್ಲಿ ಜರುಗಿತು. ಶ್ರೀ ಮಹಾವೀರ ಕಾಲೇಜಿನ ವಾಣಿಜ್ಯ ಉಪನ್ಯಾಸಕ ಹರೀಶ್ ಕಾರ್ಯಕ್ರಮ ಉದ್ಘಾಟಿಸಿ, ನಾಯಕತ್ವದ ಮಹತ್ವವನ್ನು ವಿವರಿಸಿದರು.
ಯುವ ವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರ ಸಾದು ಪೂಜಾರಿಯವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಬೆಳುವಾಯಿ ಬ್ರಹ್ಮಶ್ರೀ ನಾರಾಯಣಗುರು ಸಂಘದ ಅಧ್ಯಕ್ಷ ರಾಜೇಶ್ ಸುವರ್ಣ ಮುಖ್ಯ ಅತಿಥಿಯಾಗಿದ್ದರು.
ಯುವವಾಹಿನಿ ಬೆಳುವಾಯಿ ಘಟಕದ ಅಧ್ಯಕ್ಷ ವಿಠಲ ಪೂಜಾರಿ ಅಧ್ಯಕ್ಷತೆ ವಹಿಸಿದರು. ನೂತನ ಅಧ್ಯಕ್ಷ ಪ್ರದೀಪ್ ಸುವರ್ಣ ಉಪಸ್ಥಿತರಿದ್ದರು. ಶರತ್ ಸ್ವಾಗತಿಸಿದರು. ನಿತಿನ್ ಬೆಳುವಾಯಿ ಕಾರ್ಯಕ್ರಮ ನಿರ್ವಹಿಸಿದರು ಸುರೇಖಾ ಚಂದ್ರಶೇಖರ್ ವಂದಿಸಿದರು.

