ಬಜಪೆ: ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಎಂಟನೇ ರ್ವಾಕ ಕಲಾಪರ್ವದ ಅಂಗವಾಗಿ ಯಕ್ಷಗಾನ ಪ್ರಶಸ್ತಿ ಪ್ರಧಾನ-ಗೌರವಾರ್ಪಣೆ ಸಮಾರಂಭ ಅ.14ರಿಂದ 16ರವರೆಗೆ ಕಟೀಲು ದೇವಳದ ಸರಸ್ವತೀ ಸದನದಲ್ಲಿ ನಡೆಯಲಿದೆ.images

ಆರಂಭ ಸಂಭ್ರಮ:
ಅ.14 ಶುಕ್ರವಾರ ಬೆಳಿಗ್ಗೆ 9.30ರಿಂದ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಕಲಾವಿದರಿಂದ ಸಾಂಪ್ರದಾುಕವಾಗಿ ಚೌಕಿ ಪೂಜೆ, ಕೋಡಂಗಿ, ಬಾಲಗೋಪಾಲ ಪ್ರಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಬೆಳಿಗ್ಗೆ 10.10ರಿಂದ ಯಕ್ಷನಿದಿ ಮೂಡುಬಿದಿರೆ ಇವರಿಂದ ‘ಸುದರ್ಶನ “ವಿಜಯ’ ಯಕ್ಷಗಾನ 12.15ರಿಂದ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದವರಿಂದ ಚಂದಭಾಮಾ, ಚಪ್ಪರಮಂಚ, ಮಧ್ಯಾಹ್ನ 1.20ರಿಂದ ಚಿಕ್ಕಮಂಗಳೂರು ಹಳುವಳ್ಳಿ ಕಳಸದ ಶ್ರೀಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ ಇವರಿಂದ ‘ಮಧುರಾ ಮಹೇಂದ್ರ’ ಯಕ್ಷಗಾನ 3.25ರಿಂದ ಶ್ರೀ ದುರ್ಗಾ ಮಕ್ಕಳ ಮೇಳದವರಿಂದ ‘ಕೋಲಾಟ’ 3.40ರಿಂದ ಸಾತ್ವಿಕ ತೇಜ ಕಲಾ ತಂಡ ಒಡಿಯೂರು ಇವರಿಂದ “ವೀರಮಣಿ ಕಾಳಗ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಸಂಜೆ 6ರಿಂದ ಉದ್ಘಾಟನಾ ಸಭಾ ಕಾರ್ಯಕ್ರಮ ಜರುಗಲಿದ್ದು ಮುಂಬಾೈ ಉದ್ಯಮಿ ರಘುವೀರ್ ಶೆಟ್ಟಿ ಕಲಾಪರ್ವ ಉದ್ಘಾಟಿಸಲಿದ್ದಾರೆ. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೋಕ್ತೇಸರ ಧನಂಜಯ ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು ಕಟೀಲು ದೇವಳದ ಅನುವಂಶಿಕ ಅರ್ಚಕ ಕೆ.ಲಕ್ಷ್ಮೀನಾರಾಯಣ ಅಸ್ರಣ್ಣ ಹಾಗೂ ತಂತ್ರಿಗಳಾದ ವೇದವ್ಯಾಸ ತಂತ್ರಿ ಅವರು ಆರ್ಶಿರ್ವಚನ ನೀಡಲಿದ್ದಾರೆ.

ಇದೇ ಸಂದರ್ಭ ಕಟೀಲು ಮೇಳದ ಹಿರಿಯ ಮದ್ಧಳೆಗಾರ ಪೆರುವಾು ನಾರಾಯಣ ಭಟ್ ಅವರಿಗೆ ಶ್ರೀ ದುರ್ಗಾ ಮಕ್ಕಳಮೇಳ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹಿರಿಯ ಭಾಗವತ ಸಂಜೀವ ಶೆಟ್ಟಿ ಕೊಡೆತ್ತೂರು ಅವರಿಗೆ ಗೌರವಾರ್ಪಣೆ ನೀಡಲಾಗುವುದು. ಇದೇ ವೇಳೆ ಗುರುವಂದನೆ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 8ರಿಂದ ಪ್ರಗತಿ ಶಾಲೆ ಕುಕ್ಕಾಜೆ ಇವರಿಂದ ‘ಹಯಾಗ್ರೀವ ಚರಿತ್ರೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಅ.15 ಶನಿವಾರ ಬೆಳಿಗ್ಗೆ 9.30ರಿಂದ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದವರಿಂದ ಚೌಕಿಪೂಜೆ, ರಂಗ-ರಂಗಿ 10ರಿಂದ ಶ್ರೀ “ವಿದ್ಯಾದಾಯಿನಿ ಯಕ್ಷಕಲಾ ಮಕ್ಕಳ ಮೇಳ ಸುರತ್ಕಲ್ ಇವರಿಂದ ‘ಪಾಂಚಜನ್ಯ’ ಯಕ್ಷಗಾನ 12.05ರಿಂದ ಶ್ರೀ ದುರ್ಗಾ ಮಕ್ಕಳ ಮೇಳದವರಿಂದ ಯಕ್ಷಗಾನ ವೈಭವ 1.20ರಿಂದ ಕಾಸರಗೋಡು ಬಾಯೂರು ಶ್ರೀ ಪಂಚಲಿಂಗೇಶ್ವರ ಬಾಲ ಯಕ್ಷ ಕಲಾವೃಂದ ಇವರಿಂದ ‘ದಕ್ಷಯಜ್ಞ’ ಯಕ್ಷಗಾನ 3.25ರಿಂದ ಶ್ರೀ ದುರ್ಗಾ ಮಕ್ಕಳ ಮೇಳದವರಿಂದ ಅರೆಪಾವಿನಾಟ, 3.40ರಿಂದ ಶ್ರೀ ವಿದ್ಯಾ ಸಾಗರ ಯಕ್ಷಗಾನ ಕಲಾಶಾಲೆ ಸುಬ್ರಹ್ಮಣ್ಯ ಇವರಿಂದ ‘ಮಾನಿಷಾದ’ ಯಕ್ಷಗಾನ.

ಸಂಜೆ 5.50ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಮೋಕ್ತೇಸರ ಸುರೇಶ್ ಭಂಡಾರಿ ಕಡಂದಲೆ ಇವರು ಅಧ್ಯಕ್ಷತೆ ವಹಿಸುವರು. ಪ್ರಸಿದ್ಧ ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ ಅವರಿಗೆ ಕಟೀಲು ಕೃಷ್ಣ ಅಸ್ರಣ್ಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಯಕ್ಷಗಾನ ಕಲಾ”ದ ಪ್ರಭಾಕರ ರಾವ್ ಕೊಳಂಬೆ ಅವರಿಗೆ ಗೌರವಾರ್ಪಣೆ ಹಾಗೂ ದುರ್ಗಾ ಮೇಳದ ಪ್ರತಿಭಾಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಗುವುದು. ರಾತ್ರಿ 8ರಿಂದ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಪ್ರಾಕ್ತನ ವಿದ್ಯಾರ್ಥಿಗಳಿಂದ ‘ವಾಲಿವಧೆ’ ಯಕ್ಷಗಾನ ನಡೆಯಲಿದೆ.

ಅ.16 ಭಾನುವಾರ ಬೆಳಿಗ್ಗೆ 9.30ರಿಂದ ಶ್ರೀದುರ್ಗಾ ಮಕ್ಕಳ ಮೇಳದ”ರಿಂದ ಚೌಕಿಪೂಜೆ, ಮುಖ್ಯ ಸ್ತ್ರೀ ವೇಷ, ಹೊಗಳಿಕೆ ಪ್ರಸ್ತುತಿ 10ರಿಂದ ಪಂಚಾಕ್ಷರೀ ಮಕ್ಕಳ ಮೇಳ ಎಲ್ಲೂರು ಇವರಿಂದ ‘ದ್ರೌಪದೀ ಪ್ರತಾಪ’ ಯಕ್ಷಗಾನ 12.10ರಿಂದ ಶ್ರೀ ದುರ್ಗಾ ಮಕ್ಕಳ ಮೇಳದವರಿಂದ ಪ್ರಸಂಗ ಪೀಠಿಕೆ, ಪೀಠಿಕಾ ಸ್ತ್ರೀ ವೇಷದ ಪ್ರಸ್ತುತಿ 1.20ರಿಂದ ಬಾಲ ಯಕ್ಷ ಕೂಟ ಕದ್ರಿ ಇವರಿಂದ ‘ಸುದರ್ಶನ ಗರ್ವಭಂಗ’ 3.25ರಿಂದ ಯಕ್ಷ ಸಿಂಧೂರ ಪ್ರತಿಷ್ಠಾನ ವಿಟ್ಲ ಇವರಿಂದ “ವೀರ ಬಬ್ರುವಾಹನ’ ಯಕ್ಷಗಾನ ನಡೆಯಲಿದೆ.

ಸಂಜೆ 5.30ರಿಂದ ಸಮಾರೋಪ ಸಭಾ ಕಾರ್ಯಕ್ರಮ ನಡೆಯಲಿದ್ದು ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ಡಾ.ಕೆ.ರವೀಂದ್ರನಾಥ ಪೂಂಜಾ ಅವರು ಅಧ್ಯಕ್ಷತೆ ವಹಿಸುವರು. ಅರ್ಚಕ ಅನಂತ ಪದ್ಮನಾಭ ಅಸ್ರನ್ಣ ಅವರು ಆರ್ಶೀವರ್ಚನ ನೀಡುವರು. ಕಟೀಲು ಮೇಳದ ಹಿರಿಯ ಭಾಗವತ ಕುಬಣೂರು ಶ್ರೀಧರರಾವ್ ಅವರಿಗೆ ಕಟೀಲು ಸದಾನಂದ ಅಸ್ರಣ್ಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮದ್ಧಳೆಗಾರ ಕಟೀಲು ಮುರಳೀಧರ ಭಟ್ ಅವರಿಗೆ ಗೌರವಾರ್ಪಣೆ ನಡೆಯಲಿದೆ.

ಶಾಸಕ ಅಭಯಚಂದ್ರ ಜೈನ್ ಅವರು ಪ್ರಶಸ್ತಿ ಪುರಸ್ಕಾರನ್ನು ಅಭಿನಂಸುವರು. ರಾತ್ರಿ 7.40ರಿಂದ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದವರಿಂದ ‘ಶ್ರೀ ರಾಮ ದರ್ಶನ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಶ್ರೀ ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಶ್ರೀ ಹರಿನಾರಾಯಣ ಅಸ್ರಣ್ಣ ಹಾಗೂ ಕಾರ್ಯದರ್ಶಿ ವಾಸುದೇವ ಶೆಣೈ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *