ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜಿಪ ಗ್ರಾಮದ ಮಿತ್ತಮಜಲು ನಾಲ್ಕೈತ್ತಾಯ ದೇವಸ್ಥಾನ ಬಳಿ ಗದ್ದೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಘಟಕ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ತುಳುನಾಡ ಕೃಷಿ ಕ್ರಾಂತಿ’ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವನ್ನು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಶ್ರೀಕಾಂತ ಶೆಟ್ಟಿ ಉದ್ಘಾಟಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸುಲೋಚನಾ ಜಿ. ಕೆ. ಭಟ್, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಕಂಬಳಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ. ಆನಂದ, ಜಿಲ್ಲಾ ಕಾರ್ಯದರ್ಶಿ ರಣ್ದೀಪ್ ಕಾಂಚನ್, ಕ್ಷೇತ್ರಾಧ್ಯಕ್ಷ ಬಿ. ದೇವದಾಸ ಶೆಟ್ಟಿ, ಪ್ರಮುಖರಾದ ಜಯಶಂಕರ ಬಾಸ್ರಿತ್ತಾಯ, ಶ್ರೀನಾಥ್ ಶೆಟ್ಟಿ, ಸೀತಾರಾಮ ಅಗೋಳಿಬೆಟ್ಟು, ಜಯಪ್ರಕಾಶ್ ಪೆರ್ವ, ಉದ್ಯಮಿ ವಸಂತ ಶೆಟ್ಟಿ, ಮನೋಹರ ಶೆಟ್ಟಿ, ಬಕೆರ್ ಗುತ್ತು ಮಹಾಬಲ ರೈ, ದಾಮೋದರ ಶೆಟ್ಟಿ, ದಕ್ಷಣ್, ದಿನಕರ್ ಮತ್ತಿತರರು ಇದ್ದರು.

