ಜೇಸಿಐ ವಿಟ್ಲ ಘಟಕದ ವತಿಯಿಂದ ವಿಟ್ಲದ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿ ವಿದ್ಯಾರ್ಥಿ ಗಳಿಗೆ ಮತ್ತು ಜೆಸಿಐ ಸದಸ್ಯರಿಗೆ ತರಬೇತಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜೇಸಿಐ ವಲಯ 15 ರ ತರಬೇತಿ ವಿಭಾಗದ ನಿರ್ದೇಶಕ ಮೋಹನ ಮೈರ ಮಾಡಿದರು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಹಿರಿಯ ತರಬೇತುದಾರ ರಾಮಚಂದ್ರ ರಾವ್ `ನಾಯಕತ್ವ’ ದ ಬಗ್ಗೆ ತರಬೇತಿ ನೀಡಿದರು. ಜೆಸಿಐ ಅಧ್ಯಕ್ಷ ಸೆನೆಟರ್ ಬಾಬು ಕೊಪ್ಪಳ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್ ವಂದಿಸಿದರು. ಸೋಮಶೇಖರ್ ಸಹಕರಿಸಿದರು. ವಿಠಲ ಹೈಸ್ಕೂಲಿನ ಮುಖ್ಯ ಶಿಕ್ಷಕ ಕಿರಣ್ ಕುಮಾರ್, ರಮೇಶ್ ಬಿ ಕೆ, ಅಣ್ಣಪ್ಪ ಸಾಸ್ತಾನ, ನಿಲಯ ಮೇಲ್ವಿಚಾರಕಿ ಭವಾನಿ ಉಪಸ್ಥಿತರಿದ್ದರು.

b

By Suddi9

Leave a Reply

Your email address will not be published. Required fields are marked *