ಮೂಡುಬಿದಿರೆ: ಸಪ್ಟೆಂಬರ್ 8ರಂದು ಸಾರ್ವತ್ರಿಕ ಸರ್ಕಾರಿ ರಜೆ ಘೋಷಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಮೂಡುಬಿದಿರೆ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಸಪ್ಟೆಂಬರ್ 8 ಕ್ರೈಸ್ತ ಬಾಂಧವರಿಗೆ ಪವಿತ್ರವಾದ ತೆನೆಹಬ್ಬ ಆಚರಿಸಲಾಗುತ್ತಿದ್ದು, ಈ ಪ್ರಯುಕ್ತ ಸರ್ಕಾರಿ ರಜೆ ಘೋಷಿಸುವಂತೆ ಮಂಗಳೂರು ಧರ್ಮಪ್ರಾಂತ್ಯದ ಭಾರತೀಯ ಕಥೋಲಿಕ್ ಯುವ ಸಂಚಾಲನದ ವತಿಯಿಂದ ಜಿಲ್ಲೆಯಾದ್ಯಂತ ಸಹಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಪ್ರಯುಕ್ತ ಮೂಡುಬಿದಿರೆ ವಲಯದ 14 ಚರ್ಚ್‍ಗಳ ಸುಮಾರು 3000 ಜನತೆ ಸಹಿ ಮಾಡಿರುವ ಮನವಿ ಪತ್ರವನ್ನು ಮೂಡುಬಿದಿರೆ ತಹಸೀಲ್ದಾರ್ ಮಹಮ್ಮದ್ ಇಸಾಕ್ ಮುಖಾಂತರ ಮುಖ್ಯಮಂತ್ರಿಗಳಿಗೆ ಕಳುಹಿಸಲಾಯಿತು.mbd_aug11_9
ಮೂಡುಬಿದಿರೆ ವಲಯ ಐಸಿವೈಎಮ್ ನಿರ್ದೇಶಕ ರೆ.ಫಾ ಬಾಜಿಲ್ ವಾಸ್, ಅಧ್ಯಕ್ಷ ಜೈಸನ್ ಶಿರ್ತಾಡಿ, ಕಾರ್ಯದರ್ಶಿ ಫ್ರಾನ್ಸಿಸ್ ಮೊಂತೇರೊ, ಜೊತೆಕಾರ್ಯದರ್ಶಿ ಜೋಯ್ಸ್‍ಟನ್ ಲೋಬೊ, ಕೇಂದ್ರೀಯ ಲೆಕ್ಕ ಪರಿಶೋಧಕ ಅನೀಶ್ ಡಿಸೋಜಾ ಅಲಂಗಾರು, ಸಂಪಿಗೆ ಐಸಿವೈಎಮ್ ಅಧ್ಯಕ್ಷ ಫ್ಲಾವನ್ ಡಿಸೋಜಾ, ಮೂಡುಬಿದಿರೆ ಐಸಿವೈಎಮ್ ಅಧ್ಯಕ್ಷ ರಾಹುಲ್ ಕೊರೇಯಾ, ಪಾಲಡ್ಕ ಐಸಿವೈಎಮ್ ಅಧ್ಯಕ್ಷ ರೋಯ್ಡನ್ ಡಿಸೋಜಾ, ರಂಜಿತ್ ತಾಕೊಡೆ, ರಾಜೇಶ್ ಕಡಲಕೆರೆ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *