ವಾಮಂಜೂರು: ಮೂಲಭೂತ ಅವಶ್ಯಕತೆಗಳಾದ ಆಹಾರ, ಬಟ್ಟೆ ಹಾಗೂ ವಸತಿಯ ಜತೆಗೆ ಅಧುನಿಕ ಜಗತ್ತು ಆವರ್ತನಾ ತರಂಗಾಂತರ ಶ್ರೇಣಿಯು ನಮ್ಮ ಮೂಲ ಅವಶ್ಯಕತೆಯಾಗಿದೆ ಎಂದು ಇಸ್ರೋದ ಐಎಸ್‍ಎಸಿ ಇದರ ನಿವೃತ್ತ ಉಪ ನಿರ್ದೇಶಕ ಇ.ವಸಂತ ಹೇಳಿದ್ದಾರೆ.ವಾಮಂಜೂರಿನ ಸೈಂಟ್ ಜೋಸೆಫ್‍ನಲ್ಲಿ ಗುರುವಾರ ನಡೆದ ಸಂವನದ ಸಾಧ್ಯತೆಗಳು ಮತ್ತು ಆವರ್ತನ ತರಂಗಾಂತರ ಪ್ರಕ್ರಿಯೆಯನ್ನು ಕುರಿತ ಎರಡು ದಿವಸಗಳ ರಾಷ್ಟ್ರೀಯ ವಿಚಾರ ಸಂಕಿರರಣ ಉದ್ಘಾಟಿಸಿ ಅವರು ಮಾತನಾಡಿದರು.

ಎಲೆಕ್ಟ್ರಾನಿಕ್ ಸಂವಹನ ಕ್ಷೇತ್ರದಲ್ಲಿ ಇಂದು ಆಗಾಧವಾದ ಬದಲಾವಣೆ ಸಂಭವಿಸದ್ದು ಉಪಗ್ರಹ ಸಂವಹನದಲ್ಲೂ ತರಂಗಾಂತರ ಆವರ್ತನ ಶ್ರೇಣಿ ಅಗತ್ಯವಿದೆ. ಸಂವಹನ ಕ್ಷೇತ್ರದಲ್ಲಿ ಯುವಕರು ವಕ್ಯೂಮ್ ಟ್ಯೂಬ್,ಚಿಪ್ಸ್ ಮೊದಲಾದವುಗಳಲ್ಲು ಕೆಲಸಮಾಡುತ್ತಾರೆ. ಅಂತರ್‍ಜಾಲದಲ್ಲಿ ತೊಡಗಿಕೊಳ್ಳುವವರು ಜಾಸ್ತಿಯಾಗಿದ್ದಾರೆ.ಅಲ್ಲದೆ ಈಗಿನ ದಿನದಲ್ಲಿ ಆವರ್ತನ ಶ್ರೇಣಿಯ ತರಂಗಾಂತರವಿಲ್ಲದೆ ಅಧುನಿಕ ಜಗತ್ತನ್ನು ಊಹಿಸಲು ಅಸಾಧ್ಯ.ಇಂತಹ ರಾಷ್ಟ್ರೀಯ ವಿದ್ಯಾರ್ಥಿಗಳ ಜ್ಞಾನ ವಿಸ್ತರಿಸಲು ಸಹಾಯಕ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಹಿತ್ ಡಿಕಾಸ್ತ ,ಪ್ರಿನ್ಸಿಪಾಲ್ ಜೋಸೆಫ್ ಗೊನ್ಸಾಲ್ವಸ್,ಎಲೆಕ್ಟ್ರಾನಿಕ್ ಮತ್ತು ಸಂವಹನ ವಿಭಾಗದ ಮುಖ್ಯಸ್ಥೆ ಡಾ.ಸರಿತಾ ಎಚ್.ಎಂ,ಡಾ.ಬಿನ್ನ ಎ.ಎ ,ಅಸಿಸ್ಟೆಂಟ್ ಪೆÇ್ರ.ವಿಯೋಲಾ ಪಿಂಟೋ,ರೀಮಾ,ಉಪಪ್ರಿನ್ಸಿಪಾಲ್ ರಿಯೋಕ್ವಾಡ್ರಸ್, ಶ್ರೀಮತಿ ಶಮಾ ಬಿಎನ್ ಉಪಸ್ಥಿತರಿದ್ದರು.



