ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಇದರ ಕೇಂದ್ರ ಮಹಿಳಾ ಘಟಕದ ಪ್ರಥಮ ಸಭೆಯು ಹೊಟೇಲ್ ವುಡ್‍ಲ್ಯಾಂಡ್‍ನ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್‍ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ವಹಿಸಿದ್ದರು. ಟ್ರಸ್ಟ್‍ನ ಧ್ಯೇಯೋದ್ದೇಶಗಳನ್ನು ಪಟ್ಲ ಸತೀಶ್ ಶೆಟ್ಟಿ ಅವರು ಸಭೆಯಲ್ಲಿ ವಿವರಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಕೇಂದ್ರ ಮಹಿಳಾ ಘಟಕವು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಸಂಘಟನೆಗೆ ಆಸಕ್ತ ಮಹಿಳೆಯರನ್ನು ಸೇರಿಸಿ ಕಲಾವಿದರಿಗಾಗಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ ಅವರು ಮಾತನಾಡಿ ಪಟ್ಲ ಫೌಂಡೇಶನ್‍ನಿಂದ ಆಶ್ರಯ ಇಲ್ಲದ ಯಕ್ಷಗಾನ ವೃತ್ತಿಪರ ಕಲಾವಿದರಿಗೆ ಆಶ್ರಯ ಯೋಜನೆಯಾದ ಪಟ್ಲ ಯಕ್ಷಾಶ್ರಯ ಕಲಾಗ್ರಾಮದ ಯೋಜನೆಗಾಗಿ ಮಹಿಳಾ ಘಟಕದಿಂದ ಕಾರ್ಯಕ್ರಮವೊಂದನ್ನು ಆಯೋಜಿಸಿ ಆ ಮೂಲಕ ದೇಣಿಗೆಯನ್ನು ಟ್ರಸ್ಟ್‍ಗೆ ನೀಡುವುದಾಗಿ ಸಭೆಯಲ್ಲಿ ತಿಳಿಸಿದರು. ಅಲ್ಲದೆ ಈ ಯೋಜನೆಗೆ ತನಗೆ ಬಂದ ಕರ್ನಾಟಕ ರಾಜ್ಯ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯಿಂದ ಸರಕಾರ ನೀಡಿದ 25 ಸಾವಿರ ರೂ. ನಗದನ್ನು ಟ್ರಸ್ಟ್‍ನ ಕಾರ್ಯಯೋಜನೆಗೆ ನೀಡುವುದಾಗಿ ಪೂರ್ಣಿಮಾ ಯತೀಶ್ ರೈ ತಿಳಿಸಿದರು.

ಸಭೆಯಲ್ಲಿ ಮಹಿಳಾ ಘಟಕದ ಸಂಚಾಲಕಿ ನಿವೇದಿತಾ ಶೆಟ್ಟಿ, ಕಾರ್ಯದರ್ಶಿ ಸುಮಂಗಲಾ ರತ್ನಾಕರ್, ಕೋಶಾಧಿಕಾರಿ ವಸುಂದರ ಹರೀಶ್ ಶೆಟ್ಟಿ ಹಾಗೂ ಟ್ರಸ್ಟ್‍ನ ಪದಾಧಿಕಾರಿಗಳಾದ ಪುರುಷೋತ್ತಮ ಭಂಡಾರಿ ಅಡ್ಯಾರ್, ಸಿಎ ಸುದÉೀಶ್ ಕುಮಾರ್, ರವಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *