ಮುಂಬಯಿ, ಜು.10: ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ 4ನೇ ವರ್ಷದ ಸ್ಮರಣಾರ್ಥ ಬರುವ ಆಗಸ್ಟ್ 13-14ರ ಎರಡು ದಿನಗಳಲ್ಲಿ ಮಂಗಳೂರು ಮೂಲ್ಕಿ ಅಲ್ಲಿನ ಬಪ್ಪನಾಡು ಶ್ರೀ ದುಗರ್ಾಪರಮೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯಲಿರುವ ತುಳು ಸಮ್ಮೇಳನದ ಪೂರ್ವಭಾವಿ ಸಿದ್ಧತಾ ಸಭೆಯನ್ನು ಬಂಟ್ಸ್ ಸಂಘ ಮುಂಬಯಿ ಇದರ ಮುಖವಾಣಿ ಬಂಟರವಾಣಿ ಮಾಸಿಕ ಹಾಗೂ ಸಾಂಸ್ಕೃತಿಕ ಮತ್ತು ಸಾಹಿತ್ಯ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಇಂದು (ಜುಲೈ.11) ಸೋಮವಾರ ಸಂಜೆ 5:30 ಗಂಟೆಗೆ ಕುಲರ್ಾ ಪೂರ್ವದಲ್ಲಿನ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಮುಖವಾಣಿ ಬಂಟರವಾಣಿ ಮಾಸಿಕದ ಕಾರ್ಯಧ್ಯಕ್ಷ ಶಾಂತರಾಮ ಬಿ.ಶೆಟ್ಟಿ ತಿಳಿಸಿದ್ದಾರೆ.
ಸಭೆಯಲ್ಲಿ ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಸಂಪಾದಕ, ಪ್ರಕಾಶಕ ಎಸ್.ಆರ್ ಬಂಡಿಮಾರ್ ಸಮ್ಮೇಳನದ ಹೆಚ್ಚುವರಿ ಮಾಹಿತಿ ನೀಡಲಿದ್ದು, ಮುಂಬಯಿಯ ತುಳು ಭಾಷಿಗರು, ಅಭಿಮಾನಿಗಳು, ತುಳುನಾಡಿನ ಸಮಸ್ತ ತುಳು ಬಾಂಧವರು, ಸಾಹಿತಿಗಳು, ರಂಗಭೂಮಿ ಕಲಾವಿದರು, ಉದ್ಯಮಿಗಳು, ಸಮಾಜ ಸೇವಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸುವಂತೆ ಗೌ| ಪ್ರ| ಕಾರ್ಯದಶರ್ಿ ಉಳ್ತೂರು ಮೋಹನ್ದಾಸ್ ಶೆಟ್ಟಿ, ಸಾಂಸ್ಕೃತಿಕ ಮತ್ತು ಸಾಹಿತ್ಯ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಭಂಡಾರಿ ಹಾಗೂ ಬಂಟರವಾಣಿ ಮಾಸಿಕದ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ ಈ ಮೂಲಕ ವಿನಂತಿಸಿದ್ದಾರೆ.

