ಮುಂಬಯಿ: ಒಂದು ಸಮುದಾಯದಿಂದ ಉದಯಿಸಲ್ಪಟ್ಟ ಈ ಬ್ಯಾಂಕು ಸಮಗ್ರ ಸಮಾಜಕ್ಕೆ ಫಲಾನುಭವಿ ಆಗಿದೆ. ಶ್ರೀಸಾಮಾನ್ಯರನ್ನು ಶ್ರೀಮಂತಗೊಳಿಸಿದ ಬ್ಯಾಂಕ್ ಎಂದೇ ಗುರುತಿಸಲ್ಪಟ್ಟ ಈ ಬ್ಯಾಂಕ್ ಇಂದು ಪಾಲ್ಘಾರ್‍ವಾಸಿಗಳ ಸೇವೆಗೆ ಸಿದ್ಧಗೊಂಡಿರುವುದು ಅಭಿನಂದನೀಯ. ಬ್ಯಾಂಕ್‍ನ ಪ್ರಗತಿಗೆ ಸ್ಥಾನೀಯ ಜನತೆಯ ಸಹಕಾರ ಅವಶ್ಯವಿದ್ದು ಈ ಬ್ಯಾಂಕ್‍ನ ಶಾಖಾ ಜಾಲ ಇನ್ನಷ್ಟು ವಿಸ್ತಾರಗೊಳ್ಳಲಿ ಆ ಮೂಲಕ ಜನಸಾಮಾನ್ಯರ ದೊಡ್ಡ ಬ್ಯಾಂಕ್ ಆಗಲಿ ಎಂದು ಪಾಲ್ಘಾರ್ ಹೊಟೇಲ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ, ಜಿಲ್ಲಾ ಕಾಂಗ್ರೇಸ್ (ಐ) ಪಕ್ಷದ ಧುರೀಣ ಪೆÇಲ್ಯ ಸುರೇಂದ್ರ ಶೆಟ್ಟಿ ನುಡಿದರು.Bharat Bank (95) Palghar-A1

 

Bharat Bank (95) Palghar-A2

 

Bharat Bank (95) Palghar-A4

 

Bharat Bank (95) Palghar-1

 

Bharat Bank (95) Palghar-22

 

Bharat Bank (95) Palghar-17

 

Bharat Bank (95) Palghar-A1

Bharat Bank (95) Palghar-8

Bharat Bank (95) Palghar-13

ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಸಂಸ್ಥೆಯು ತನ್ನ 95ನೇ ಶಾಖೆಯನ್ನು ಜು. 7ರಂದು ಗುರುವಾರ ಬೆಳಿಗ್ಗೆ ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಪಾಲ್ಘಾರ್ ಪಶ್ಚಿಮದ ಟೆಂಬೊಡೆ ರಸ್ತೆಯಲ್ಲಿನ ಪುನಿತ್‍ನಗರ್ ಕಟ್ಟಡದಲ್ಲಿ ಸೇವಾರಂಭಿಸಿದ್ದು, ಉದ್ಘಾಟನಾ ಸಮಾರಂಭದಲ್ಲಿ ಗೌರವ್ವಾನಿತ ಅತಿಥಿüಯಾಗಿ ಉಪಸ್ಥಿತರಿದ್ದು ಸುರೇಂದ್ರ ಶೆಟ್ಟಿ ಮಾತನಾಡಿದರು.

ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ರಿಬ್ಬನ್ ಬಿಡಿಸಿ ಹಾಗೂ ಮಹಾರಾಷ್ಟ್ರ ರಾಜ್ಯ ಹೋಮ್‍ಗಾರ್ಡ್‍ನ ನಿವೃತ್ತ ಕಮಾಂಡಿಗ್ ಅಧಿಕಾರಿರಾಮದಾಸ್ ಎಲ್.ಜವ್ಹಾರ್ಕರ್ ದೀಪ ಪ್ರಜ್ವಲಿಸಿ ಶಾಖೆಯನ್ನು ಸೇವಾರ್ಪಣೆ ಗೊಳಿಸಿದರು. ಬ್ಯಾಂಕ್‍ನ ನಿರ್ದೇಶಕ ದಾಮೋದರ ಸಿ.ಕುಂದರ್ ಎಟಿಎಂ ಸೇವೆ, ನಿರ್ದೇಶಕ ಆರ್.ಡಿ ಪೂಜಾರಿ ಲಾಕರ್ ಸೇವೆಗೆ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆ ನೀಡಿದರು.

ಶ್ರೀ ಶನಿಮಹಾತ್ಮ ಸೇವಾ ಸಮಿತಿ ಖಾರ್ ಅಧ್ಯಕ್ಷ ಶಂಕರ್ ಕೆ. ಸುವರ್ಣ ಮಾತನಾಡಿ ಪರಿಶ್ರಮ ಹಾಗೂ ಶಿಸ್ತಿನ ಸೇವೆಯ ಮೂಲಕ ಬ್ಯಾಂಕು ಶೀಘ್ರಗತಿಯಲ್ಲಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಅಧಿಕಾರಿ ವರ್ಗದ ಕಾರ್ಯತತ್ಪರತೆ ಬ್ಯಾಂಕ್‍ನ ಅಭಿವೃದ್ಧಿಗೆ ಒಂದೆಡೆ ಪೂರಕವಾದರೆ ಜಯ ಸುವರ್ಣ ಹಾಗೂ ನಿರ್ದೇಶಕ ಮಂಡಳಿ ಯ ಪ್ರಾಮಾಣಿಕತೆ, ಅವಿರತಶ್ರಮವೂ ಗ್ರಾಹಕರ ತೃಪ್ತಿದಾಯಕ ಸೇವೆಗೆ ಕಾರಣವಾಗಿದೆ. ಭವಿಷ್ಯತ್ತಿನುದ್ದಕ್ಕೂ ಪ್ರಗತಿಯ ಶೋಧದ ಪಥದಲ್ಲಿ ಸಾಗಲಿ ಎಂದು ಶುಭ ಕೋರಿದರು.

ಗ್ರಾಹಕರ ಯಶಸ್ಸೇ ಬ್ಯಾಂಕ್‍ನ ಯಶ. ಪರಸ್ಪರರಲ್ಲಿನ ಸಂಬಂಧಗಳಿಂದಲೇ ಎಲ್ಲರ ಜೀವನ ಇದಕ್ಕೆ ಭಾರತ್ ಬ್ಯಾಂಕ್ ಮಾದರಿ ಎಂದು ರಾಮದಾಸ್ ಜವ್ಹಾರ್ಕರ್ ಶುಭಾರೈಸಿದರು.

ಥಾಣೆ ಜಿಲ್ಲಾ ನ್ಯೂಸ್ ಪೇಪರ್ ರಿಪೋರ್ಟರ್ಸ್ ಫೆಡರೇಶನ್‍ನ ಅಧ್ಯಕ್ಷ ಸಕಾಳ್ ದೈನಿಕದ ಹಿರಿಯ ಪತ್ರಕರ್ತ ಪಿ.ಎಂ ಪಾಟೀಲ್ ಮಾತನಾಡಿ ಗ್ರಾಹಕರಲ್ಲಿ ಅನ್ಯೋನತಾ ಬಾಂಧ್ಯವ್ಯ ಹೊಂದಿರುವ ಈ ಬ್ಯಾಂಕ್ ತನ್ನದೇ ಆದ ಪ್ರತಿಷ್ಠೆಯನ್ನೊಂದಿದೆ. ವಿವಿಧತೆಯಲ್ಲಿ ಏಕತೆ ಕಂಡ ಏಕೈಕ ಸಹಕಾರಿ ಬ್ಯಾಂಕ್ ಎನ್ನುವಷ್ಟಕ್ಕೆ ಪಾತ್ರವಾದ ಈ ಬ್ಯಾಂಕ್ ಒಳ್ಳೆಯ ಕೆಲಸ ಮತ್ತು ದೃಢತೆಯಿಂದಾಗಿ ಮುನ್ನಡೆಯುತ್ತಿದೆ. ಇಂತಹ ಬ್ಯಾಂಕ್ ಪ್ರಗತಿ ಸಾಧಿಸಲಿ ಎಂದರು.

ಕಾರ್ಯಾಧ್ಯಕ್ಷ ಜಯ ಸುವರ್ಣ, ಸಿ.ಆರ್ ಮೂಲ್ಕಿ, ನಿರ್ದೇಶಕರುಗಳಾದ ದಾಮೋದರ ಸಿ.ಕುಂದರ್, ಆರ್.ಡಿ ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್, ಬ್ಯಾಂಕ್‍ನ ಮುಖ್ಯ ವ್ಯವಸ್ಥಾಪಕ ಅನಿಲ್‍ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕ ನಿತ್ಯಾನಂದ ಡಿ.ಕೋಟ್ಯಾನ್, ಬ್ಯಾಂಕ್‍ನ ಉಪ ಮಹಾ ಪ್ರಬಂಧಕರುಗಳಾದ ವಿ.ಎಸ್ ಶ್ಯಾನ್‍ಭಾಗ್, ನವೀನ್‍ಚಂದ್ರ ಎಸ್.ಬಂಗೇರ, ಮಾಜಿ ನಿರ್ದೇಶಕ ಎನ್.ಎಂ ಸನೀಲ್, ನಿವೃತ್ತ ಮಹಾ ಪ್ರಂಬಧಕಿ ಶೋಭಾ ದಯಾನಂದ್ ಉಪಸ್ಥಿತರಿದ್ದು, ನೂತನ ಶಾಖೆಯ ಮುಖ್ಯಸ್ಥೆ ಜ್ಯೋತಿ ಜವ್ಹಾರ್ಕರ್, ಸಹಾಯಕ ಪ್ರಬಂಧಕ ಪ್ರಕಾಶ್ ಪೂಜಾರಿ, ಸಿಬ್ಬಂದಿಗಳಾದ ವಿಜಯ್ ಸನೀಲ್, ಅಭಿಲಾಷ್ ಸುವರ್ಣ, ಅತುಲ್ ಪರಾಡ್ಕರ್ ಮತ್ತು ಉಪಸ್ಥಿತ ಮಹಾನೀಯರುಗಳಿಗೆ ಪುಷ್ಫಗುಪ್ಚನೀಡಿ ಶುಭಾರೈಸಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಪ್ರಭಾಕರ್ ಸಾಲ್ಯಾನ್ ಬೊಯಿಸರ್, ಕಂದಸ್ವಾಮಿ ತೆವರ್, ವಾಸು ಪೂಜಾರಿ, ಕರುಣಾಕರ ಸಾಲ್ಯಾನ್, ಭುಜಂಗ ಶೆಟ್ಟಿ ಬೊಯಿಸರ್, ಸುರೇಂದ್ರ ಶೆಟ್ಟಿ, ಶ್ರೀನಿವಾಸ ಕೋಟ್ಯಾನ್ ಬೊಯಿಸರ್, ಸತೀಶ್ ಶೆಟ್ಟಿ, ಎಸ್.ಕೆ ಸ್ವಾಮಿ, ಪ್ರವೀಣ್ ಶೆಟ್ಟಿ, ಜಗನ್ನಾಥ್ ಎಂ.ಅಮೀನ್, ಯೋಗೇಶ್ ಶೆಟ್ಟಿ, ಗಿರೀಶ್ ಶೆಟ್ಟಿ, ಮಯೂರ್ ಎನ್.ಜೋಶಿ, ಆರ್ಕಿಟೆಕ್ಟ್ ಯೋಗೇಶ್ ಮಹಾಧಿಕ್, ಪ್ರಶಾಂತ್ ಶೆಟ್ಟಿ ಕಾಪು, ರಾಜೇಶ್ ಶೆಟ್ಟಿ ಹೆಜ್ಮಾಡಿ, ಸೇರಿದಂತೆ ಬ್ಯಾಂಕ್‍ನ ಅಭಿವೃದ್ಧಿ ಇಲಾಖಾಧಿಕಾರಿಗಳಾದ ಸುನೀಲ್ ಗುಜರನ್, ವಿಜಯ ಪಾಲನ್, ಅವೀಶ್ ಪೂಜಾರಿ ಸೇರಿದಂತೆ ಅನೇಕ ಗ್ರಾಹಕರು, ಷೇರುದಾರರು, ಹಿತೈಷಿಗಳು ಉಪಸ್ಥಿತರಿದ್ದರು.

ಉಳ್ಳೂರು ಶೇಖರ್ ಶಾಂತಿ ಹಾಗೂ ಉಳ್ಳೂರು ಧನಂಜಯ್ ಶಾಂತಿ, ದಿನೇಶ್ ಶಾಂತಿ ಅವರು ಗಣಹೋಮ, ಲಕ್ಷ್ಮೀಸತ್ಯನಾರಾಯಣ ಪೂಜೆ, ವಾಸ್ತುಪೂಜೆ ಮತ್ತು ಹೋಮ, ವಾಸ್ತು ಬಲಿ, ದ್ವಾರಪ್ರವೇಶ ಪೂಜೆ ನೆರವೇರಿಸಿ ಹರಸಿದರು. ಗಂಗಾಧರ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು. ಜ್ಯೋತಿ ರಾಜೇಶ್ ಜವ್ಹಾರ್ಕರ್ ದಂಪತಿ ಪೂಜಾಧಿಗಳಲ್ಲಿ ಪಾಲ್ಗೊಂಡರು. ಬ್ಯಾಂಕ್‍ನ ಉಪ ಮಹಾ ಪ್ರಬಂಧಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ ಸ್ವಾಗತಿಸಿ, ಬ್ಯಾಂಕ್‍ನ ಸೇವಾ ವೈಖರಿಯನ್ನು ಪ್ರಸ್ತಾಪಿಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಚಿತ್ರ ವರದಿ : ರೋನ್ಸ್ ಬಂಟ್ವಾಳ್

By Suddi9

Leave a Reply

Your email address will not be published. Required fields are marked *