ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಮಾರೂರು ಪಂಜಿಗುಡ್ಡೆ ಆಶ್ರಯ ಕಾಲನಿಯಲ್ಲಿ ಪುರಸಭೆಯ ವತಿಯಿಂದ ಫಲಾನುಭವಿಗಳಿಗೆ ನೀಡಿರುವ ನಿವೇಶನವು ಅವ್ಯವಸ್ಥೆಯಿಂದ ಕೂಡಿದೆ.
ಮಾರೂರಿನ ಪಂಜಿಗುಡ್ಡೆಯಲ್ಲಿ ಆಶ್ರಯ ಮನೆಗಳಿಗೆ ಸುಮಾರು ಎರಡೂವರೆ ಎಕರೆ ಪ್ರದೇಶವನ್ನು ನಿವೇಶನಕ್ಕೆ ಕಾದಿರಿಸಿದ್ದು ಅದರಲ್ಲಿ 1.5 ಸೆಂಟ್ಸ್‍ನಂತೆ 60 ಜನರಿಗೆ ಆಶ್ರಯ ಮನೆಗಳನ್ನು ಮಾಡಲು ನಿವೇಶನಗಳಿಗೆ ಗಡಿ ಗುರುತುಗಳನ್ನು ಹಾಕಿ ಹಂಚಿಕೆ ಮಾಡಲಾಗಿದೆ. ಆದರೆ ಇಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ, ನೀರು ಹಾಗೂ ವಿದ್ಯುತ್ ಸೌಲಭ್ಯಗಳನ್ನು ಒದಗಿಸಿಲ್ಲ .ಖಾಸಗಿ ವ್ಯಕ್ತಿಗಳು ಮಾಡುವ ಲೇಔಟ್‍ಗಳಿಗೆ ಚರಂಡಿ, ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕಗಳು ಇರಬೇಕೆಂದು ಶರತ್ತುಗಳನ್ನು ಹಾಕುವ ಪುರಸಭೆಯೂ ತಾನು ಬಡಜನರಿಗೆ ನೀಡುವ ನಿವೇಶನಗಳಲ್ಲಿ ಸರಿಯಾಗಿ ವ್ಯವಸ್ಥೆಯನ್ನು ಮಾಡಿಲ್ಲ. ಬಡವರಿಗೆ ನೀಡುವ ನಿವೇಶನದಲ್ಲಿ ಮನೆಗಳಿಗೆ ನಿರ್ಮಿಸುವ ಶೌಚಾಲಯಗಳಿಗೆ ಬಿಡ್ಡ್ ತೆಗೆಯಲು ಜಾಗ ಇಲ್ಲದಂತಾಗಿದೆ.

ತ್ಯಾಜ್ಯಕ್ಕೆ ಪರಿಹಾರವಿಲ್ಲ: ಈ ಲೇಔಟನ್ನು ಮಾಡಲು ಸುಮಾರು 7-8 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಆದರೆ ನಿವೇಶನದ ಸುತ್ತ ತಡೆಗೋಡೆಯಿಲ್ಲದೆ ಮಳೆಗೆ ಸೈಟ್‍ಗಳು ಕೊಚ್ಚಿ ಹೋಗಿ ಪಕ್ಕದ ಕೃಷಿ ಭೂಮಿಗೆ ಮಣ್ಣು ತುಂಬಿಕೊಳ್ಳುತ್ತಿದೆ. ಈ ನಿವೇಶನದಲ್ಲಿ 60 ಆಶ್ರಯ ಮನೆಗಳನ್ನು ನಿರ್ಮಿಸಲು ಅನುಮತಿ ನೀಡಿರುವ ಪುರಸಭೆಯು ತ್ಯಾಜ್ಯ ಸಮಸ್ಯೆಗೆ ಪರಿಹಾರವನ್ನು ಒದಗಿಸಿಲ್ಲ.
—



