ಬಂಟ್ವಾಳ: ಹೆಜ್ಜೆಗೊಂದರಂತೆ ಹೊಂಡ ಅದರೊಳಗೆ ಎದ್ದು ಬಿದ್ದು ಹೋಗುವ ವಾಹನಗಳು. ಘನವಾಹನಗಳ ಚಕ್ರ ಹೊಂಡಕ್ಕೆ ಸಿಕ್ಕರೆ ಸಾಕು ದ್ವಿಚಕ್ರ ವಾಹನ, ಪಾದಾಚಾರಿಗಳಿಗೆ ಕೆಸರು ನೀರಿನ ಅಭಿಷೇಕಇದು ಬಿ.ಸಿ.ರೋಡಿನ ಸರ್ವೆಸ್ ರಸ್ತೆಯ ದುಸ್ಥಿತಿ. ಮಳೆಗಾಲ ಬಂದರೆ ಈ ರಸ್ತೆಗಳಲ್ಲಿ ಬೃಹತ್ ಗಾತ್ರದ ಹೊಂಡಗಳು ಮೂಡುತ್ತದೆ. ವಾಹನ ಚಾಲಕರು ಹಾಗೂ ಪ್ರಯಾಣಿಕರಿಗೆ ಹಿಂಸೆ ನೀಡುತ್ತದೆ.
3

2 (1)

2
ಪ್ರತೀ ವರ್ಷವೂ ಮಳೆಗಾಲದಲ್ಲಿ ಸರ್ವೆಸ್ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡಗಳು ಉಂಟಾಗಿ ವಾಹನಗಳು ಸಂಚಾರಕ್ಕೆ ತೊಂದರೆ ಪಡುತ್ತಿದ್ದವು. ಇದರಿಂದಾಗಿ ವಾಹನ ಸವಾರರು ಬಿ.ಸಿ.ರೋಡಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಜನರು ಹಲವು ಸಮಯಗಳ ಕಾಲ ಜನರು ತೊಂದರೆ ಅನುಭವಿಸಿದ ಬಳಿಕ ಎಚ್ಚೆತ್ತುಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಳಿಕ ಹೊಂಡಗಳಿಗೆ ತೇಪೆ ಮುಚ್ಚಿ ಮರುಡಾಮರೀಕರಣ ನಡೆಸಿತ್ತು. ಇದೀಗ ಅದರ ಅಸಲಿಯತ್ತು ಅನಾವರಣಗೊಂಡಿದೆ. ಒಂದೇ ಮಳೆಗೆ ಡಾಮಾರು ಎದ್ದು ಹೋಗಿದ್ದು ಮತ್ತೆ ಸರ್ವೆಸ್ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿವೆ.

ಮಳೆಗಾಲ ಆರಂಭವಾಗುವ ಹೊತ್ತಿನಲ್ಲೇ ರಸ್ತೆಯಲ್ಲಿ ಹೊಂಡಗಳು ಕಾಣಿಸಿಕೊಂಡಿತ್ತು. ಮಳೆ ನೀರು ಬಿದ್ದ ಮೇಲಂತೂ ಇವುಗಳ ಆಳ ಅಗಲಗಳನ್ನು ಇನ್ನಷ್ಟು ವಿಸ್ತರಿಸಿಕೊಂಡಿತ್ತು. ಈ ಬಗ್ಗೆ ಮೊದಲೇ ಅರಿವಿದ್ದರೂ ರಾಷ್ಟ್ರೀಯ ಹೆದ್ದೃಆಇ ಪ್ರಾಧಿಕಾರ ರಸ್ತೆಯನ್ನು ಸುಸ್ಥಿತಿಗೆ ತರುವ ಪ್ರಯತ್ನ ಮಾಡಿಲ್ಲ. ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭಗೊಂಡ ಬಳಿಕ ಪ್ರತೀ ವರ್ಷ ಮಳೆಗಾಲದಲ್ಲಿ ಬಿ.ಸಿ.ರೋಡಿನಲ್ಲಿ ಪ್ರಯಾಣಿಕರು ಪ್ರಯಾಸ ಪಡುವುದು ಮಾಮೂಲಾಗಿದೆ.

By Suddi9

Leave a Reply

Your email address will not be published. Required fields are marked *