ಮುಂಬಯಿ, ಮೇ.20: ಬಂಟ್ವಾಳದ ಎಸ್‍ವಿಎಸ್ ಕಾಲೇಜು ಸನಿಹದ ಕಾಮಲ್‍ಕಟ್ಟೆ ನಿವಾಸಿ ಆಗಿದ್ದು ಕಳೆದ ಹಲವಾರು ವರ್ಷಗಳಿಂದ ಮೈಸೂರುನ ಇಂದ್ರಭವನ ಹೊಟೇಲ್‍ನಲ್ಲಿ ಶ್ರಮಿಸುತ್ತಿದ್ದ ಸ್ಟೇನಿ ಫ್ರಾಂಕ್ (54.) ಇವರು ಹೃದಯಘಾತದಿಂದ ಇಂದಿಲ್ಲಿ ಶುಕ್ರವಾರ ಮುಂಜಾನೆ ತನ್ನ ಮೈಸೂರುನ ಲೂರ್ಡ್ಸ್ ನಗರದ ಫಿಲೋಮೆನಾ ವಿಲ್ಲಾ ನಿವಾಸದಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ (ಐರಿನ್ ಫ್ರಾಂಕ್), ಒಂದು ಗಂಡು (ರಿತೇಶ್), ಒಂದು ಹೆಣ್ಣು (ರಿಯಾ) ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ನಾಳೆ (21.ಮೇ.2016) ಶನಿವಾರ ಬೆಳಿಗ್ಗೆ 10.00 ಗಂಟೆಗೆ ಮೈಸೂರು ಅಲ್ಲಿನ ಲೂರ್ಡ್ಸ್ ನಗರದ ಫಿಲೋಮೆನಾ ವಿಲ್ಲಾದಿಂದ ಹೊರಟು ಬೆಳಿಗ್ಗೆ 10.30 ಗಂಟೆಗೆ ಸೈಂಟ್ ಫಿಲೋಮೆನಾ ಚರ್ಚ್ ಮೈಸೂರು ಇಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲವು ತಿಳಿಸಿದೆ.

