ಬಂಟ್ವಾಳ: ಮಂಗಳೂರು ಮಹಾ ನಗರಕ್ಕೆ ನೀರು ಪೂರೈಸುವ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ 4.8ಕ್ಕೆ ಕುಸಿದಿದ್ದು ನದಿಯಲ್ಲಿ ಜಿಲ್ಲಾಡಳಿತ ಹೂಳೆತ್ತಲು ಮುಂದಾಗಿದೆ. ಈಗಾಗಲೇ ಡ್ರಜ್ಜಿಂಗ್ ಯಂತ್ರವನ್ನು ನದಿ ತೀರಕ್ಕೆ ತಂದು ನಿಲ್ಲಿಸಲಾಗಿದ್ದು, ಬಾನುವಾರ ಇಲ್ಲವೆ ಸೋಮವಾರ ಹೂಳೆತ್ತುವ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.
ಜಿಲ್ಲಾಡಳಿತದ ನಿರ್ದೇಶನದಂತೆ ತುಂಬೆಯಲ್ಲಿ ಹೂಳೆತ್ತಲಾಗುತ್ತಿದೆ. ಇನ್ನೆರಡು ದಿನಕ್ಕೆ ಬೇಕಾಗುವಷ್ಟೇ ನೀರು ಇರುವುದರಿಂದ ನೀರು ಮೇಲೆಕ್ಕೆತ್ತುವ ಪೈಪ್ ಸುತ್ತಮುತ್ತ ಇರುವ ಹೂಳನ್ನು ತೆರವುಗೊಳಿಸಿ ಆಳ ತೋಡಲು ನಿರ್ಧರಿಸಲಾಗಿದೆ. ಇದರಿಂದ ಒಂದಷ್ಟು ನೀರು ಹೆಚ್ಚುವ ಸಂಭವವಿದೆ. 
