ಮುಂಬಯಿ: ಕನ್ನಡ ಕಲಾವೃಂದ ಮುಂಬಯಿ ಸಂಸ್ಥೆಯು ಆಯೋಜಿಸಿರುವ ಮೂರುದಿನಗಳ ಕನ್ನಡ ನಾಟಕೋತ್ಸವದಲ್ಲಿ ಮಹಾನಗರದಲ್ಲಿನ ಹೆಸರಾಂತ, ಪ್ರಶಸ್ತಿ ಪುರಸ್ಕೃತ ನಾಟಕಕಾರ ಸಾ.ದಯಾ
(ದಯಾನಂದ ಸಾಲ್ಯಾನ್) ರಚಿಸಿ, ನಿರ್ದೇಶಿಸಿದ`ಚೌಕಟ್ಟಿನಾಚೆಯ ಚಿತ್ರ’ ನಾಟಕವನ್ನು ಮುಂಬಯಿ ಚುಕ್ಕಿ ಸಂಕುಲ ತಂಡವು ಪ್ರದರ್ಶಿಸಿತು.
ನಾಟಕೋತ್ಸವದ ಎರಡನೇ ದಿನವಾದ ಇಂದಿಲ್ಲಿ ಮಂಗಳವಾರ ಸಂಜೆ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಡಾ| ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಪ್ರದರ್ಶಿಸಲ್ಪಟ್ಟ `ಚೌಕಟ್ಟಿನಾಚೆಯ ಚಿತ್ರ’ ಜನಸಾಮಾನ್ಯರಂತೆಯೇ ಮಂಗಳಮುಖಿಯರದ್ದೂ ಬದುಕು ನೀತಿ ಸಾರುವ ನಾಟಕದಲ್ಲಿ ಜಗದೀಶ್ ಡಿ.ರೈ (ಗುರು), ರಾಜೇಂದ್ರ ಮಡಿವಾಳ (ಮಲ್ಲಿಕಾ), ಸಂತೋಷ್ ದೇವಾಡಿಗ (ರಜನಿ) ಅಹಲ್ಯಾ ಬಲ್ಲಾಳ್ (ಅಮ್ಮ ಮತ್ತು ದಾಸಿ), ಗೋಪಾಲ್ ತ್ರಾಸಿ (ಯೋಗಿತಾ, ಸಾಯಿರಾ), ರಕ್ಷಿತ್ ಪೂಜಾರಿ (ರಾಣಿ), ನಿತೇಶ್ ದೇವಾಡಿಗ (ಅಜ್ಜ), ಶುೃತಿ ದೇವಾಡಿಗ (ದೇಥರ ಮಗಳು), ರವಿ ಎಸ್.ಶೆಟ್ಟಿ (ಪೊಲೀಸ್, ಅಣ್ಣ), ಅರುಣ್ ಮೊಗವೀರ (ದಾಮಿನಿ), ಭೀಮರಾಯ ಚಿಲ್ಕ (ಜಮುನಾ), ನೀಶಾ ದೇವಾಡಿಗ (ಪ್ರೀತಿ, ಅಣ್ಣನ ಪತ್ನಿ), ಕರುಣಾಕರ ಶೆಟ್ಟಿ, ಹೆಬ್ರಿ(ಭೀಷ್ಮ), ಶಂಕರ್ ಪೂಜಾರಿ (ಆಶಾ), ಗುರುಪ್ರಸಾದ್ ದೇವಾಡಿಗ (ದೇಥರ), ಶಿವಸಾಗರ್ ದೇವಾಡಿಗ (ಬಪಿಯ), ದೀಪಾ ದೇವಾಡಿಗ (ಸಹೋದರಿ), ಉಮೇಶ್ ಸುವರ್ಣ (ರೂಪೇಶ್) ವಿವಿಧ ಪಾತ್ರಗಳೊಂದಿಗೆ ಅಭಿನಯಿಸಿದ್ದರು. ಕುಸುಮ ಅಮೀನ್, ಪಿ.ಬಿ ಚಂದ್ರಹಾಸ್ ಅವರ ರಂಗ ನಿರ್ವಾಹಣೆ, ಅರುಷಾ ಎನ್.ಶೆಟ್ಟಿ, ಜಿ.ಪಿ.ಕುಸುಮ ಅವರ ನೇಪಥ್ಯ, ಮಂಜುನಾಥ ಶೆಟ್ಟಿಗಾರ್ ಪ್ರಸಾದನ, ನಯನ ಡಿ.ಸಾಲ್ಯಾನ್ ವಸ್ತ್ರ ವಿನ್ಯಾಸ, ಗಣೇಶ್ ಕುಮಾರ್ ಕೆ. ಕಲೆ, ಪರಿಕರ, ರಕ್ಷಿತ್ ಹಾಗೂ ಶುೃತಿ ಅವರ ನೃತ್ಯ ಸಂಯೋಜನೆ, ವಾಸು ಜೆ.ಮೊೈಲಿ ಅವರ ಸಂಗೀತ, ಲ್ಯಾನ್ಸಿ ಡಿ’ಅಲ್ಮೇಡಾ ಅವರ ಕೀಬೋರ್ಡ್, ಜನಾರ್ಧನ ಸಾಲ್ಯಾನ್ ಅವರ ತಬಲ, ಚೇತನಾ ಗಣೇಶ್ ಕುಮಾರ್, ಶಕುಂತಳಾ ಪ್ರಭು, ವಿಶ್ವನಾಥ ಶೆಟ್ಟಿ ಪೇತ್ರಿ ಮತ್ತು ಜಯಲಕ್ಷ್ಮಿ ಪಾಟೀಲ್ ಅವರ ಸಹಾಯದೊಂದಿಗೆ ಮೂಡಿ ಬಂದನಾಟಕಕ್ಕೆ ಸಾದಯಾ ಅವರೇ ಬೆಳಕು, ರಂಗವಿನ್ಯಾಸ ನೀಡಿದ್ದರು. ಕನ್ನಡ ಕಲಾವೃಂದ ಮುಂಬಯಿ ಸಂಸ್ಥೆಯ ಅಧ್ಯಕ್ಷ ಬೈಲೂರು ಬಾಲಚಂದ್ರ ರಾವ್, ಉಪಾಧ್ಯಕ್ಷ ಎಸ್.ಎಂ.ಶೆಟ್ಟಿ, ಗೌ|ಪ್ರ| ಕಾರ್ಯದರ್ಶಿ ಟಿ.ಆರ್ ಮಧುಸೂದನ್, ಕೋಶಾಧಿಕಾರಿ ರಮೇಶ್ ಎಂ.ರಾವ್, ಜೊತೆ ಕಾರ್ಯದರ್ಶಿ ರಮೇಶ್ ಬಿರ್ತಿ, ನುರಿತ ರಂಗಕರ್ಮಿಗಳಾದ ಡಾ| ಭರತ್‍ಕುಮಾರ್ ಪೆÇಲಿಪು, ಓಂದಾಸ್ ಕಣ್ಣಂಗಾರ್, ಬಿ.ಎಸ್.ಕುರ್ಕಾಲ್, ರಂಗ ಪೂಜಾರಿ, ಎಸ್.ಕೆ.ಸುಂದರ್, ರಾಜೀವ ನಾೈಕ್, ಅಶೋಕ್ ವಳವೂರು, ಡಾ| ಕರುಣಾಕರ ಶೆಟ್ಟಿ, ನ್ಯಾ| ಅಮೀತಾ ಬಾಗ್ವತ್ ಸೇರಿದಂತೆ ರಂಗಾಸಕ್ತರು, ನಾಟಕ ಕಲಾಭಿಮಾನಿಗಳು ಹಾಜರಿದ್ದರು. ಬುಧವಾರ (ಮಾ.30) ಸಂಜೆ ಗೋಕುಲ ಕಲಾವೃಂದ ಸಯಾನ್ ತಂಡವು ತೋನ್ಸೆ ವಿಜಯಕುಮಾರ್ ಶೆಟ್ಟಿದಿಗ್ದರ್ಶನದಲ್ಲಿ `ಅಮ್ಮ ನಿವೃತ್ತರಾಗ್ತಾರೆ’ ನಾಟಕಪ್ರದರ್ಶಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.











