ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಸಮೀಪದ ರಿಕ್ರಿಯೇಶನ್ ಕ್ಲಬ್ಗೆ ಇಲ್ಲಿನ ಪ್ರೊಬೆಶನರಿ ಎಎಸ್ಪಿ ಲಕ್ಷ್ಮಣ ನಿಂಬರ್ಗಿ ಮತ್ತು ಡಿಸಿಐಬಿ ಇನ್ಸ್ಪೆಕ್ಟರ್ ಅಮಾನುಲ್ಲಾ ನೇತೃತ್ವದ ಪೊಲೀಸರು ಶನಿವಾರ ರಾತ್ರಿ ಕಾರ್ಯಾಚರಣೆ ಅಕ್ರಮ ಜುಗಾರಿ ಆಟದಲ್ಲಿ ನಿರತರಾಗಿದ್ದ 14 ಮಂದಿಯನ್ನು ರೂ 91, 720 ಮೊತ್ತದ ನಗದು ಸಹಿತ ಬಂಧಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ಶಿವಪ್ರಸಾದ್, ಹಂಝ, ಶ್ರೀನಿವಾಸ, ಮಹಮ್ಮದ್ ಕುಂಞಿ, ಅಬ್ದುಲ್ ಖಾದರ್, ರಾಜೇಶ, ಸುಲೇಮಾನ್, ಗೋಪಾಲಕೃಷ್ಣ, ಅಬ್ದುಲ್ ರಹಿಮಾನ್, ಶಂಸುದ್ದೀನ್, ಜಾನ್ ಸಲ್ಡಾನ್ಹ, ಮಹಮ್ಮದ್ ಅನ್ಸಾರ್, ಅಬ್ದುಲ್ ಅಜೀಝ್, ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದ್ದು, ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇವರು ಆಟಕ್ಕೆ ಬಳಸಿದ್ದಾರೆನ್ನಲಾದ ಹಲವು ಪ್ಯಾಕೆಟ್ ಇಸ್ಪೀಟು ಕಾಡರ್ು ಸಹಿತ ರೂ 60ಸಾವಿರ ಮೌಲ್ಯದ ಒಟ್ಟು 18 ಮೊಬೈಲ್, ರೂ ಆರು ಲಕ್ಷ ಮೌಲ್ಯದ ಮಾರುತಿ ಶಿಫ್ಟ್ ಕಾರು, ದುಂಡಗೆ ಟೇಬಲ್ ಮತ್ತು ಕುರ್ಚಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಠಾಣೆ ಕ್ರೈಂ ಎಸೈ ಗಂಗಾಧರಪ್ಪ ತಿಳಿಸಿದ್ದಾರೆ.
