ಬಂಟ್ವಾಳ: ಸನಾತನ ಸಂ ತಿ ಹೊಂದಿರುವ ಭಾರತೀಯರಲ್ಲಿ ಧಾರ್ಮಿಕತೆಯಿಂದ ಸುಸಂಸ್ಕøತ ಮತ್ತು ರಾಷ್ಟ್ರಭಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ನೈಜ ರಾಷ್ಟ್ರಭಕ್ತರಲ್ಲಿ ಪರಸ್ಪರ ಧಾರ್ಮಿಕ ಅಪನಂಬಿಕೆ ಮತ್ತು ಅಸಹಿಷ್ಣುತೆ ಕಂಡು ಬರುವುದಕ್ಕೂ ಸಾಧ್ಯವಿಲ್ಲ ಎಂದು ಬೆಂಜನಪದವು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಹೇಮಾ ರವಿಚಂದ್ರ ಮಯ್ಯ ಹೇಳಿದ್ದಾರೆ.
ತಾಲ್ಲೂಕಿನ ನರಿಕೊಂಬು ಗ್ರಾಮದ ಅಂತರ ರಾಮನಗರ ಹಿಂದೂ ಯುವ ಶಕ್ತಿ ಇದರ ವತಿಯಿಂದ ಸ್ಥಳೀಯ ನೇಲ್ಯಡ್ಕ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಚಿಂತನಾ ಸಭೆ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಜಗತ್ತಿಗೆ ಒಳಿತನ್ನು ಬಯಸುವ ಭಾರತೀಯ ಯುವ ಸಮೂಹಕ್ಕೆ ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ಶಿವಾಜಿ ಮಹಾರಾಜರ ಧೈರ್ಯ ಪ್ರೇರಣೆಯಾಗಲು ಮಕ್ಕಳ ಹೆತ್ತವರು ಮತ್ತು ಇಂತಹ ಸಂಘಟನೆಗಳಿಗೆ ಮಹತ್ತರ ಜವಾಬ್ದಾರಿ ಇದೆ ಎಂದು ಅವರು ಹೇಳಿದರು.
ಸ್ಥಳೀಯ ಆಯುರ್ವೇದ ವೈದ್ಯರಾದ ಡಾ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮಲ್ಲಿ ಸ್ವದೇಶಿ ಚಿಂತನೆ ಮತ್ತು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಮೊಗರ್ನಾಡು ಶ್ರೀ ಮಹಾಗಣಪತಿ ದೇವಸ್ಥಾನದ ಹಿರಿಯ ಅರ್ಚಕ ಶ್ರೀನಿವಾಸ ಐತಾಳ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ ಇವರು ಶುಭ ಹಾರೈಸಿದರು.
ಇದೇ ವೇಳೆ ಯುವ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಬಾಲ ಪ್ರತಿಭೆಗಳಾದ ಸೀಮಾ ಕರ್ಬೆಟ್ಟು, ಭರತ್ ಕರ್ಬೆಟ್ಟು, ಭವ್ಯಶ್ರೀ ಕೇದಿಗೆ ಇವರನ್ನು ಸನ್ಮಾನಿಸಲಾಯಿತು. ಸಂಘದ ಸಂಚಾಲಕ ಗಣೇಶ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಮಾಜಿ ಸಂಚಾಲಕ ನವೀನ ಅಂತರ ಸ್ವಾಗತಿಸಿ, ಸದಸ್ಯ ಶ್ರೀಕಾಂತ್ ನೇಲ್ಯಡ್ಕ ವಂದಿಸಿದರು. ಶಿಕ್ಷಕಿ ವಿಜಯಾ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.
