ಪೊಳಲಿ: ಮಂಗಾಜೆ ಕೋರ್ದಬ್ಬು ಸೇವಾ ಸಮಿತಿಯ ವಾರ್ಷಿಕ ಮಹಾ ಸಭೆಯು ಕೋರ್ದಬ್ಬುದೈವಸ್ಥಾನದ ವಠಾರದಲ್ಲಿ ಮಾ.27ರಂದು ಭಾನುವಾರ ವಾಮನ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. 2016-17 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಆಯ್ಕೆಯಾಗಿದ್ದಾರೆ.
ಗೌರವಧ್ಯಕ್ಷರಾಗಿ ಶ್ರೀಕರ ಶೆಟ್ಟಿ , ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಉಪಾಧ್ಯಕ್ಷರಾಗಿ ತಾರನಾಥ ಮಣಿಕಂಠಪುರ, ಕಾರ್ಯದರ್ಶಿಯಾಗಿ ಶೇಖರ ಬಂಗೇರಾ, ಉಪಕಾರ್ಯದರ್ಶಿಯಾಗಿ ಅಶೋಕ ಬಡಕಬೈಲ್ ಕೋಶಾಧಿಕಾರಿಯಾಗಿ ಸಂತೋಷ್ ಆಯೆರೆಮಾರ್.ಸಂಚಾಲಕರಾಗಿ ನಾರಯಣ ಪೂಜಾರಿ, ಲೆಕ್ಕಪರಿಶೋಧಕರಾಗಿ ಚರಣ್ ಅವರನ್ನು ಆಯ್ಕೆ ಮಾಡಲಾಯಿತು. ಮತ್ತು ಕಾರ್ಯಕಾರಿ ಸಮಿತಿಯಲ್ಲಿ ವಾಸುದೇವ ಬೆಲ್ಚಡ, ಜಯಂತ ಮಣಿಕಂಠಪುರ, ಕಿರಣ್ ಕುಮಾರ್ ಮೀಯಾಳ, ಅರುಣ್ ಕುಮಾರ್ ಆಯೆರೆಮಾರ್, ಸಂದೀಪ್ ಬಡಕಬೈಲ್, ಅಶೋಕ ಮಂಗಾಜೆ, ಶಿವಪ್ರಸಾದ್ ಆಯೆರೆಮಾರ್ , ಭಾಸ್ಕರ ಮೇಸ್ತ್ರಿ , ವಿಶ್ವನಾಥ ದಯಾನಂದ ಮಣಿಕಂಠಪುರ ಇವರನ್ನು ಸವಾನುಮತದಿಂದ ಆಯ್ಕೆ ಮಾಡಲಾಯಿತು.
