ಕೈಕಂಬ: ಪೆರ್ಮಂಕಿ ಪಾಲಿಕಟ್ಟೆ ವರ್ಷಾವಧಿ ನೇಮೋತ್ಸವ ಮಾ.28ರಂದು ಸೋಮವಾರದಿಂದ ಮಾ. 30 ಬುಧವಾರದ ತನಕ ಪೆರ್ಮಂಕಿ ಪಾಲಿಕಟ್ಟೆ ಶ್ರೀ ವೈದ್ಯನಾಥ, ಮಹೀಷಂದಾಯ, ಧೂಮಾವತಿ ಬಂಟ ದೈವಗಳ ನೇಮೋತ್ಸವ ಜರಗಲಿದೆ.
ಮಾ. 28ರಂದು ಬೆಳಗ್ಗೆ 8.30 ಕ್ಕೆ ಪೆರ್ಮಂಕಿಗುತ್ತು ಮನೆಯಲ್ಲಿ ಗಣಪತಿ ಹೋಮ ದೈವಗಳಿಗೆ ಹೋಮ, ಕಜ್ಜಾಯ ಸೇವೆ, ಬೆಳಗ್ಗೆ 10.30 ಕ್ಕೆ ದೈವದ ದರ್ಶನ ನಂತರ ಪೆರ್ಮಂಕಿ ಗುತ್ತುಮತ್ತು ಹೊಸಮನೆ ಕುಟುಂಬಿಕರಿಂದ ದೈವಗಳಿಗೆ ನೂತನ ಬೆಳ್ಳಿಯ ಮುಖವಾಡ ಸಮರ್ಪಣೆ. ನಂತರ ಪೆರ್ಮಂಕಿ ಗುತ್ತಿನಿಂದ ಭಂಡಾರವು ಪಾಲಿಕಟ್ಟೆ ದೈವಸ್ಥಾನಕ್ಕೆ ಬಂದು ಭಂಡಾರ ಏರುವುದು. ಮಧ್ಯಾಹ್ನ 12 ಕ್ಕೆ ಪಲ್ಲ ಪೂಜೆ ನಂತರ ಅನ್ನ ಸಂತರ್ಪಣೆ.
ರಾತ್ರಿ 9.30 ರೀಂದ ಮೈಸಂದಾಯ ದೈವದ ನೇಮ ರಾತ್ರಿ 11.30 ರಿಂದ ಶ್ರೀ ವೈದ್ಯನಾಥ ದೈವದ ಗಗ್ಗರ ಸೇವೆ ವಲಸರಿ ಅಭಯ ಪ್ರಧಾನ. ಮಾ.29 ರಂದು ಮಂಗಳವಾರ ಸಂಜೆ 7 ಗಂಟೆಯಿಂದ ಲಲಿತ ಕಲಾವಿದರಿಂದ ತುಳು ಪೌರಾಣಿಕ ನಾಟಕ ಕುದುರುದ ಸಿರಿದೇವಿ ಭ್ರಮರಾಂಬೆ ರಾತ್ರಿ 10.30ರಿಂದ ಶ್ರೀ ಧೂಮಾವತಿಬಂಟ ದೈವಗಳ ನೇಮ.
ಮಾ. 30 ರಂದು ದೈವಗಳ ಭಂಡಾರವು ಪೆರ್ಮಂಕಿಗುತ್ತಿನ ಮನೆಗೆ ನಿರ್ಗಮಿಸುವುದು. ಎಂದು ಆಡಳಿತ ಮಂಡಳಿ ತಿಳಿಸಿದೆ.
