ಮುಂಬಯಿ, ಮಾ.21: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ| ಜಿ.ಎನ್.ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಮೋಗವೀರ ಮಾಸಿಕದ ಮಾಜಿ ಸಂಪಾದಕಿ, ಕವಯತ್ರಿ ಜಿ.ಪಿ ಕುಸುಮಾ ಅವರ `ಮುಂಬಯಿಯಲ್ಲಿ ಮೊಗವೀರ ಸಮುದಾಯ ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ಮಹಾ ಪ್ರಬಂಧಕ್ಕೆ ಮುಂಬಯಿ ವಿಶ್ವವಿದ್ಯಾಲಯ ಪಿಹೆಚ್.ಡಿ ಪದವಿ ನೀಡಿ ಗೌರವಿಸಿತು.

ಸಾಂತಾಕ್ರೂಜ್ ಪೂರ್ವದಲ್ಲಿನ ಕಲೀನಾ ಕ್ಯಾಂಪಸ್ನ ವಿದ್ಯಾನಗರಿಯಲ್ಲಿನ ಮುಂಬಯಿ ವಿಶ್ವವಿದ್ಯಾಲಯದ ರಾನಡೆ ಭವನದಲ್ಲಿ ಇಂದಿಲ್ಲಿ ಸೋಮವಾರ ಪೂರ್ವಾಹ್ನ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ನಡೆಸಲಾದ ಘಟಿಕೋತ್ಸವದಲ್ಲಿ ಜಿ.ಪಿ ಕುಸುಮಾ ಅವರು ಸಾರ್ವಜನಿಕವಾಗಿ ತನ್ನ ಮಹಾ ಪ್ರಬಂಧವನ್ನು ಸ್ಥೂಲವಾಗಿ ಮಂಡಿಸಿದರು. ನೆರೆದವರ ಸಾರ್ವತ್ರಿಕ ಅಭಿಪ್ರಾಯಗಳ ಬಳಿಕ ಮೌಲ್ಯಮಾಪಕಿಯಾಗಿ ಉಪಸ್ಥಿತ ಭಂಡಾರ್ಕಾಸ್ ಕಾಲೇಜು ಕುಂದಾಪುರ ಇದರ ಕನ್ನಡ ವಿಭಾಗ ಮುಖ್ಯಸ್ಥೆ ಡಾ| ರೇಖಾ ಬನ್ನಾಡಿ ಅವರು ಜಿ.ಪಿ ಕುಸುಮಾ ಅವರಿಗೆ ಸೆರ್ಟಿಫಿಕೇಟು ನೀಡಿ ಸ್ವರ್ಣ ಪದಕ ಧರಿಸಿ, ಶಾಲು ಹೊದಿಸಿ ಡಾಕ್ಟರೇಟ್ ಪದವಿ ಪ್ರಧಾನಿಸಿದರು.
G.P. Kusuma Doctrate-B2

G.P. Kusuma Doctrate-B4

G.P. Kusuma Doctrate-A1

G.P. Kusuma Doctrate-A3
ರೇಖಾ ಬನ್ನಾಡಿ ಮಾತನಾಡಿ ಬಡತನ, ವೃದ್ಧಿತ ಜನಸಂಖ್ಯೆ, ನಿರುದ್ಯೋಗದ ಕಾಡಾಟದಂತಹ ವಿಚಾರಗಳು ಹೊರನಾಡ ಕನ್ನಡಿಗರಿಗೆ ಸಾಧನೆಗೆ ಪ್ರೇರಣೆಯಾಗಿದೆ. ಬದಕು ಆಶೆಗಳು, ವಲಯ ವಿಸ್ತ್ರಕೃತ ಇಲ್ಲಿನ ಜನತೆಯ ಹೊಸ ಬದುಕು, ಸಂಶೋಧನೆಗೆ ಪ್ರೇರರವಾಗಿ ಸಾಧನೆಗೆ ದಿಕ್ಸೂಚಿಯಾಗಿದೆ. ಕುಸುಮಾ ಅವರು ಪ್ರಬಂಧದ ತತ್ವಕತೆ ವಿವರಿಸಿರುವುದು ಪ್ರಶಂಸನೀಯ. ಅವರ ಸಂಶೋಧನೆಯ ಅದ್ವೀತಿಯ ಸಾಧನೆ ಸ್ತುತ್ಯರ್ಹ. ಕುಡುವಿಕೆಯಿಂದ ಇಲ್ಲದನ್ನು ಇರುವಿಕೆ ಮಾಡಿಸಿದ ಮೊಗವೀರರು ಸಹಬಾಳ್ವೆಗೆ ಮೊಗವೀರರು ಪ್ರೇರಕರು. ಸಾಮಾಜಿಕ ಚಿಂತನಾಕ್ರಮ ಧಕ್ಕಿಸಿದಾಗ ಶ್ರಮಕ್ಕೆ ಗೌರವ, ಬೆಲೆ ಬರುತ್ತದೆ. ಮೊಗವೀರರು ಹಲವು ಸಾಧನೆಗಳ ಸರದಾರರಾಗಿದ್ದು, ವೈಚಾರಿಕ ಚಿಂತನೆಯ ನಿಯಮಾವಳಿಂದ ಬದುಕುವ ಜಾತ್ಯಾತೀತರಲ್ಲೂ ಇವರೇ ಪ್ರಥಮರು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ದುಡಿಮೆ ಅದೃಶ್ಯವಾಗಿದ್ದರೂ ಮುಂಚೂಣಿಯಲ್ಲಿ ಯಜಮಾನತ್ವ ಪಡೆದವರಲ್ಲಿ ಮೊಗವೀರ ಮಹಿಳೆಯರೇ ಮೊದಲಿಗರು. ಸಂಶೋಧನೆ ಚಲನಶೀಲವಾಗಿದ್ದು. ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಜಾಣ್ಮೆಯೇ ಸಂಶೋಧನೆಯಾಗಿದೆ. ಮಾನವ ವಿಕಸನದ ಪ್ರಕ್ರಿಯೆ ಇದಾಗಿದ್ದು, ಮೊಗವೀರರ ಏಳುಬೀಳುಗಳ ಅವಲೋಕನ, ವಿವೇಚನೆ, ದಾಖಲೆ ಈ ಸಂಶೋಧನೆಯಲ್ಲಿದೆ ಎಂದರು.

ಇದೇ ಸಂದರ್ಭದಲ್ಲಿ ನಾಡಿನ ಹೆಸರಾಂತ ಸಾಹಿತಿ ಡಾ| ಜೋತ್ಸಾ ್ನ ಕಾಮತ್ ಬೆಂಗಳೂರು ಉಪನ್ಯಾಸವನ್ನಿತ್ತು ಮೊಗವೀರ ಮಹಿಳೆಯರು ಸಂಘರ್ಷದ ಬದುಕನ್ನು ರೂಢಿಸಿ ತಮ್ಮ ಧೀರತ್ವವನ್ನು ಮೆರೆದವರಾಗಿದ್ದಾರೆ. ಪರಂಪರೆಯನ್ನು ಕಾಯ್ದುಕೊಂಡು ಅವುಗಳನ್ನು ಉಳಿಸಿ ಬೆಳೆಸುತ್ತಾ ಆಧುನಿಕ ಯುಗಕ್ಕೆ ತಮ್ಮ ತಾಕತ್ತನ್ನು ತೋರ್ಪಡಿಸಿದ ಘನತೆ ಇವರದ್ದಾಗಿದೆ. ತಮ್ಮದೇ ಆದ ಪ್ರತಿಷ್ಠೆ, ವಿಶಿಷ್ಟ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು.

ಇದು ನಮ್ಮ ವಿಭಾಗದ ಐದನೇ ಬಾರಿಯ ಮುಕ್ತ ಮೌಕಿಕ ಪರೀಕ್ಷಾ ಪ್ರಕ್ರಿಯೆಯಾಗಿದೆ.ಇಲ್ಲಿನ 74 ವಿಭಾಗಗಳಲ್ಲಿ 4 ವಿಭಾಗಗಳು ಮಾತ್ರ ಇದನ್ನು ಅರ್ಥಪೂರ್ಣವಾಗಿ ನಡೆಸುತ್ತದೆ. ಕುಲಪತಿಗಳ ಅನುಮತಿ ಮೇರೆಗೆ ಸಾರ್ವಜನಿಕವಾಗಿ ಮೌಕಿಕ ಪರೀಕ್ಷೆ ನಡೆಸುತ್ತಿದ್ದೇವೆ. ಮೊಗವೀರರ ಏಳು ಬೀಳಗಳ ಅವಲೋಕನ ಇದಾಗಿದ್ದು, ಈ ಸಂಶೋಧನೆಯಲ್ಲಿ ವಲಸಿಗ ಮೊಗವೀರರ ವಿವೇಚನೆಗಳು ದಾಖಲಾಗಿದ್ದು, ಇಲ್ಲಿ ವಿಶೇಷವಾಗಿ ಮುಂಬಯಿಯಲ್ಲಿ ಅದ್ಭುತ ಸಾಧಕರನ್ನು ಗುರುತಿಸಲಾಗಿದೆ. ಮೊಗವೀರರು ಜಾತ್ಯಾತೀತ ಧೋರಣೆ ಮೈಗೂಡಿಸಿ ದ ಸಮುದಾಯ ಎನ್ನುವುದು ರುಜುವಾತುವಾಗಿತ್ತಿದ್ದು, ಮುಂಬಯಿಗೆ ಮೊಗವೀರರ ಅನನ್ಯ ಕೊಡುಗೆ ಶ್ಲಾಘನೀಯ ಎಂದು ಡಾ| ಜಿ.ಎನ್.ಉಪಾಧ್ಯ ನುಡಿದರು.

ಈ ಸಂದರ್ಭದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಅಜಿತ್ ಜಿ.ಸುವರ್ಣ, ನ್ಯಾ| ಜಿ.ಕೆ ಕರ್ಕೇರ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ,ಮೋಗವೀರ ಮಾಸಿಕದ ಸಂಪಾದಕ ಅಶೋಕ್ ಎಸ್.ಸುವರ್ಣ, ಜಿ.ಕೆ ಕರ್ಕೇರ, ನಾರಾಯಣ ಬಂಗೇರ ಡೊಂಬಿವಿಲಿ,ಸದನಂದ ಕೆ.ಉಚ್ಚಿಲ, ಹರೀಶ್ ಕೆ.ಹೆಜ್ಮಾಡಿ, ಶ್ರೀನಿವಾಸ ಜೋಕಟ್ಟೆ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿ ಜಿ.ಪಿ ಕುಸುಮಾ ಅವರಿಗೆ ಶುಭಾರೈಸಿದರು.
ಅರುಣ್ ಕುಮಾರ್, ಸಂಜೀವ ಕಾಂಚನ್, ಬಿ.ಎಸ್ ಕುರ್ಕಾಲ್, ಡಾ| ಬಿ.ಲೀಲಾ, ಎಸ್.ಕೆ ಸುಂದರ್, ಸುರೇಶ್ ಕುಂದರ್, ಮಾ| ಅರ್ಥ್ ಎಸ್.ಕುಂದರ್, ಸಂತೋಷ್ ಮೊಗವೀರ, ಡಾ| ಸುಷ್ಮಾ ಆರೂರ್, ಕೆ.ಪಿ ಮೆಂಡನ್, ರಘುನಾಥ್ ಬಿ.ಕುಂದರ್, ಹೆ.ಎಸ್ ಉಚ್ಚಿಲ್, ಶಕುಂತಳಾ ಮೆಂಡನ್, ಡಾ| ಜಯಶ್ರೀ ಸಾಲ್ಯಾನ್, ಜ್ಯೋತಿಶ್ರೀ ಐ.ದೇಶ್ಪಾಂಡೆ, ರೂಪಾ ಸಂಗೋಳಿ ಮುಂತಾದ ಗಣ್ಯರು ಉಪಸ್ಥಿತರಿದ್ದು ಕುಸುಮಾ ಅವರ ಸಾಧನೆಗೆ ಅಭಿನಂದಿಸಿದರು. ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಚಿತ್ರ ವರದಿ : ರೋನ್ಸ್ ಬಂಟ್ವಾಳ್

By Suddi9

Leave a Reply

Your email address will not be published. Required fields are marked *