ಬಡಗಬೆಳ್ಳೂರು: ಆರೋಗ್ಯ ರಕ್ಷಣೆಯಲ್ಲಿ ಸೊಪ್ಪು ತರಕಾರಿ ನಾರಿನಂಶದ ಸೇವನೆ ಮಹತ್ವದಾಗಿದೆ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಜವಾಬ್ದರಾರಿ ನಮ್ಮದ್ದು ಎಂದು ಮಂಗಳೂರು ಲಯನ್ಸ್ ಕ್ಲಬ್‍ನ ಅಧ್ಯಕ್ಷರಾದ ಆಶಾ.ಸಿ.ಶೆಟ್ಟಿ ಹೇಳಿದರು, ಅವರು ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದ ಉಚಿತ ಕಣ್ಣು ತಪಾಸಣಾ ಶಿಬಿರ ಮತ್ತು ಉಚಿತ ಕಣ್ಣು ಶಸ್ರ್ರಚಿಕಿತ್ಸೆಯನ್ನು ಉದ್ಘಾಟಿಸಿ ಮಾತನಾಡಿದರು.
ಲಯನ್ಸ್, ಲಯನೆಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಕಂಕನಾಡಿ ಪಡೀಲ್ ಹಾಗೂ ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ ಮಂಗಳೂರು ಮತ್ತು ದಿಶಾ ಟ್ರಸ್ಟ್ (ರಿ) ಕೈಕಂಬ, ಕಾವೇಶ್ವರ ಕೃಷಿಕರ ಸಂಘ ಬಡಗಬೆಳ್ಳೂರು ಇವರ ಸಹಯೋಗದೊಂದಿಗೆ ನಡೆದ ಕಣ್ಣು ತಪಾಸಣೆಯನ್ನು ಮಂಗಳೂರಿನ ನೇತ್ರ ತಜ್ಞರಾದ ಡಾ/.ಜತಿನ್ ಹೊಳ್ಳರ ನೇತ್ರತ್ವದಲ್ಲಿ ತಂಡ ನಡೆಸಿಕೊಟ್ಟಿತ್ತು.ಕಾವೇಶ್ವರ ಕೃಷಿಕರ ಸಂಘದ ಅಧ್ಯಕ್ಷರಾದ ಶ್ರೀಕೃಷ್ಣ ಪ್ರಸಾದ್ ಆಳ್ವ, ದಿಶಾ ಟ್ರsಸ್ಟ್ ನ ನಿರ್ದೇಶಕರಾದ ಸಿಲ್ವೆಸ್ಟರ್ ಡಿ ಸೋಜ, ಮಂಗಳೂರು ಲಯನೆಸ್ ಕ್ಲಬ್‍ನ ಅಧ್ಯಕ್ಷರಾದ ಆಶಾ ಹೆಜಮಾಡಿ ಉಪಸ್ಥಿತರಿದ್ದರು.ದಿಶಾ ಸಂಸ್ಥೆಯ ಕಾರ್ಯಕರ್ತೆ ಶ್ರೀಮತಿ ಗುಣವತಿ ಕಾರ್ಯಕ್ರಮ ನಿರೂಪಿಸಿದರು. ಕಾವೇಶ್ವರ ಸಂಘದ ಸದಸ್ಯರಾದ ಸವಿತ ಶೆಟ್ಟಿ ಸ್ವಾಗತಿಸಿ, ವಿಶ್ವಂಭರ ಭಂಡಾರಿ ವಂದಿಸಿದರು.ಒಟ್ಟು 120 ಜನರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

By Suddi9

Leave a Reply

Your email address will not be published. Required fields are marked *