ಬಂಟ್ವಾಳ: ವಿಟ್ಲ ರೋಟರಿ ಕ್ಲಬ್ ವತಿಯಿಂದ ವಿಠಲ ಪ್ರೌಢ ಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ಗೆ ಡಿಸ್ಟ್ರಿಕ್ಟ್ ಗವರ್ನರ್ ಪಿ ಹೆಚ್ ಎಫ್ ಡಾ| ಭರತೇಶ್ ಆಧಿರಾಜ್ ಚಾಲನೆ ನೀಡಿದರು.
ನೂತನ ಕ್ಲಬ್ ನ ಅಧಯಕ್ಷರಾಗಿ ಗಣೇಶ್ ಪ್ರಸಾದ್ ಮತ್ತು ಕಾರ್ಯದರ್ಶಿಯಾಗಿ ಮನಿಷಾರವರನ್ನು ಆಯ್ಕೆ ಮಾಡಲಾಯಿತು. ರೊ| ರಾಮಕೃಷ್ಣ ಬಲ್ಲಾಳ್ ಪ್ರತಿಜ್ಞಾವಿಧಿ ಬೋಧಿಸಿದರು. ವಿಠಲ ವಿದ್ಯಾ ಸಂಘದ ಉಪಾಧ್ಯಕ್ಷ ಕ ಶಿ ವಿಶ್ವನಾಥ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಸ್ವಾಗತಿಸಿದರು . ಸಭಾಧ್ಯಕ್ಷತೆ ವಹಿಸಿದ ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಡಿ ಬಿ ಅಬೂಬಕ್ಕರ್ ಪ್ರಸ್ತಾವಿಸಿದರು. ವಿಜೇತಾ ಮತ್ತು ಪ್ರತಿಭಾ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕ್ಲಬ್ನ ಸದಸ್ಯರು, ಕೋ-ಆಡಿನೇಟರ್ ಎಂ ಕೆ ವೀಣಾದೇವಿ ಮತ್ತು ರಮೇಶ್ ಬಿ ಕೆ , ರೋಟರಿ ಕ್ಲಬ್ ಸದಸ್ಯರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
