ಬಂಟ್ವಾಳ, ಮಾ. 3: ಮಡಿಕೇರಿಯ ತಾಳತ್ ಮನೆ ಎಂಬಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಮೂಲತಃ ಮಂಗಳೂರು ತಾಲೂಕಿನ ವಳಚ್ಚಿಲ್ ನಿವಾಸಿ ಪ್ರಸ್ತುತ ಫರಂಗಿಪೇಟೆಯ ಹತ್ತನೇಮೈಲುಗಲ್ಲಿನಲ್ಲಿ ವಾಸವಿರುವ ವಿ.ಎಚ್.ಅಬ್ದುಲ್ ಲತೀಫ್ ಎಂಬವರ ಪುತ್ರ ವಿ.ಎಚ್.ಅಶ್ವಾನ್(18) ಮೃತ ಯುವಕ.
ಫೆ. 24ರಂದು ಅಶ್ವಾನ್ ಸೇರಿ ಐವರು ಸ್ನೇಹಿತರು ಪ್ರವಾಸಕ್ಕೆಂದು ಕಾರಿನಲ್ಲಿ ಮಡಿಕೇರಿಗೆ ತೆರಳಿದ್ದು, ಮಡಿಕೇರಿಯ ತಾಳತ್ ಮನೆ ಎಂಬಲ್ಲಿ ಸಂಜೆಯ ವೇಳೆಗೆ ಟಿಪ್ಪರ್ ಲಾರಿಗೆ ಕಾರು ಢಿಕ್ಕಿ ಹೊಡೆದಿತ್ತು.  ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಶಫೀಕ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದರೆ, ಶಮೀರ್ ಎಂಬಾತ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ವಿ.ಎಚ್.ಅಶ್ವಾನ್, ಶಮೀರ್, ಇರ್ಫಾನ್ ಎಂಬವರು ಗಂಭೀರ ಗಾಯಗಳೊಂದಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇಂದು ಬೆಳಗ್ಗೆ ರಕ್ತದ ಒತ್ತಡ ಕಡಿಮೆಯಾಗಿ ಅಶ್ವಾನ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಅಶ್ವಾನ್ ಮಂಗಳೂರಿನ ಬಿಡಿಪಿಎಸ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಾಂಕ ಮಾಡುತ್ತಿದ್ದ. ಇರ್ಫಾನ್ ಮತ್ತು ಶಮೀರ್ ಚೇತರಿಸಿಕೊಂಡಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

By Suddi9

Leave a Reply

Your email address will not be published. Required fields are marked *