ಬಂಟ್ವಾಳ; ಶನಿವಾರ ನಡೆಯಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ತಾಲೂಕು ಆಡಳಿತ ಶಾಂತಿಯುತ ಮತದಾನಕ್ಕೆ ಸಂಪೂರ್ಣ ಸಜ್ಜಾಗಿದೆ.
ಮತಗಟ್ಟೆಗಳಿಗೆ ನಿಯೋಜಿಸಲ್ಪಟ್ಟ ಅಧಿಕಾರಿಗಳು ಮೊಡಂಕಾಪು ಇನ್ಫೆಂಟ್ ಜೀಸಸ್ ವಿದ್ಯಾಸಂಸ್ಥೆಯಲ್ಲಿರುವ ಮಸ್ಟರಿಂಗ್ ಕೇಂದ್ರದಿಂದ ಶುಕ್ರವಾರ ಅಪರಾಹ್ನವೇ ಮತಗಟ್ಟೆಗಳಿಗೆ ಮತಯಂತ್ರಗಳೊಂದಿಗೆ ಪಯಣ ಬೆಳೆಸಿದರು.


288 ಮತಗಟ್ಟೆ
ಜಿಲ್ಲಾಪಂಚಾಯತ್ ನ 9 ಸ್ಥಾನಗಳಿಗೆ ಹಾಗೂ ತಾಲೂಕು ಪಂಚಾಯತ್ ನ 34 ಸ್ಥಾನಗಳಿಗೆ ಚುನಾವಣೆ ನಡೆಸಲು 288 ಮತಗಟ್ಟೆಗಳನ್ನು ನಿಗದಿಪಡಿಸಲಾಗಿದ್ದು,ಇದರಲ್ಲಿ 113 ಸೂಕ್ಷ್ಮ, 31 ಅತಿಸೂಕ್ಷ್ಮ ಹಾಘೂ 144 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಒಟ್ಟು 2,67,381 ಮತದಾರರಿದ್ದು, ಇದರಲ್ಲಿ 1,33,857 ಪುರುಷ ಮತದಾರರು ಹಾಗೂ 1,33,524 ಮಹಿಳಾ ಮತದಾರರಿದ್ದಾರೆ.
ಚುನಾವಣಾಧಿಕಾರಿ ಮಂಗಳೂರು ಸಹಾಯಕ ಕಮೀಷನರ್, ನೋಡಲು ಅಧಿಕಾರಿ ಉಮೇಶ್ ಎನ್.ಆರ್, ತಹಶೀಲ್ದಾಋ ಪುರಂದರ ಹೆಗ್ಡೆ, ಉಪತಹಶೀಲ್ದಾರ್ ಪರಮೇಶ್ವರ ನಾಯ್ಕ್ ಮತ್ತು ಚುನಾವಣೆಗೆ ನಿಯೋಜಿಸಿದ ಅಧಿಕಾರಿಗಳು ಹಾಜರಿದ್ದು, ಸಿದ್ದತೆಯಲ್ಲಿ ಸಹಕರಿಸಿದರು.
ಬಂದೋಬಸ್ತ್
ತಾಲೂಕು ವ್ಯಾಪ್ತಿಯ ಪೊಲೀಸ್ ಠಾಣೆಗಳು ಪೊಲೀಸ್ ಸಿಬ್ಬಂದಿಗಳನ್ನು ಚುನಾವಣಾ ಬಂದೋಬಸ್ತ್ ಗೆ ನೇಮಿಸಲಾಗಿದೆ ಮಾಥ್ರವಲ್ಲದೆ, ಬಾಗಲಕೋಟೆಯ ಓರ್ವ ಡಿಎಸ್ಪಿ, ಇಬ್ಬರು ಸಿಪಿಐ, 2 ಪಿಎಸ್ಐ, 210 ಪೊಲೀಸ್ ಕಾನ್ಸ್ಸ್ಟೇಬಲ್ ಹಾಗೂ 130 ಹೋಂ ಗಾರ್ಡ್ಗಳನ್ನು ನಿಯೋಜಿಸಲಾಗಿದೆ.
ಚಿತ್ರ ಕಿಶೋರ್ ಪೆರಾಜೆ




