ಬಂಟ್ವಾಳ:ಬಂಟ್ವಾಳ ತಾಲ್ಲೂಕಿನಲ್ಲಿ ಕಳೆದ ಬಾರಿ ಒಟ್ಟು 33 ಸ್ಥಾನ ಹೊಂದಿದ್ದ ತಾಲ್ಲೂಕು ಪಂಚಾಯಿತಿನಲ್ಲಿ ಈ ಬಾರಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ 34 ಸ್ಥಾನಗಳಿಗೆ ಏರಿಕೆಗೊಂಡಿದೆ. ಇಲ್ಲಿನ ಒಟ್ಟು 34 ಸ್ಥಾನಗಳಿಗೆ ಈ ಬಾರಿ ಒಟ್ಟು 92 ಮಂದಿ ಕಾಂಗ್ರೆಸ್-ಬಿಜೆಪಿ ಮಾತ್ರವಲ್ಲದೆ ಜೆಡಿಎಸ್, ಸಿಪಿಐ, ಸಿಪಿಎಂ, ಎಸ್ಡಿಪಿಐ ಹಾಗೂ ಪಕ್ಷೇತರರು ಕಣದಲ್ಲಿ ಉಳಿದು ಗೆಲುವಿಗೆ ಸೆಣಸಾಟ ನಡೆಸುತ್ತಿದ್ದಾರೆ. ಇಲ್ಲಿನ 18 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯುತ್ತಿದ್ದರೆ, 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಾತ್ರವಲ್ಲದೆ ಎಸ್ಡಿಪಿಐ, ಸಿಪಿಐ, ಸಿಪಿಐಎಂ ಹೀಗೆ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಆರು ಕ್ಷೇತ್ರಗಳ ಪೈಕಿ ಐದರಲ್ಲಿ ಚತುಷ್ಕೋನ ಮತ್ತು ಒಂದು ಕ್ಷೇತ್ರದಲ್ಲಿ ಮಾತ್ರ ಎರಡೆರಡು ಪಕ್ಷೇತರರು ಸೇರಿ ಒಟ್ಟು ಆರು ಮಂದಿ ಕಣದಲ್ಲಿ ಉಳಿದು ಗಮನ ಸೆಳೆದಿದ್ದಾರೆ.
ನೇರ ಸ್ಪರ್ಧೆ :
ತಾಲ್ಲೂಕಿನ ಅಮ್ಟಾಡಿ ಕ್ಷೇತ್ರದಲ್ಲಿ ಮಲ್ಲಿಕಾ ವಿ.ಶೆಟ್ಟಿ (ಕಾಂಗ್ರೆಸ್) ಮತ್ತು ಲೇಖಾ ಪ್ರಸನ್ನ ಭಂಡಾರಿ (ಬಿಜೆಪಿ), ರಾಯಿ: ಇಂದಿರಾ ಮಧುಕರ ಬಂಗೇರ (ಬಿಜೆಪಿ), ಮಂಜುಳಾ ಸದಾನಂದ ಮೂಲ್ಯ(ಕಾಂಗ್ರೆಸ್), ಪಂಜಿಕಲ್ಲು: ಪದ್ಮಾವತಿ ಪೂಜಾರಿ (ಕಾಂಗ್ರೆಸ್), ಶೈಲಜಾ ವಿ.ಸಾಲ್ಯಾನ್(ಬಿಜೆಪಿ), ಸಂಗಬೆಟ್ಟು: ಪ್ರಭಾಕರ ಪ್ರಭು(ಕಾಂಗ್ರೆಸ್), ರತ್ನಕುಮಾರ್ ಚೌಟ (ಬಿಜೆಪಿ), ಚೆನ್ನೈತ್ತೋಡಿ: ಆಶಾ ಜಯರಾಮ ಶೆಟ್ಟಿ ಕಾಪು(ಬಿಜೆಪಿ), ರತ್ನಾವತಿ ಜಯರಾಮ ಶೆಟ್ಟಿ (ಕಾಂಗ್ರೆಸ್), ಪಿಲಾತಬೆಟ್ಟು: ರಮೇಶ ಕುಡ್ಮೇರು(ಬಿಜೆಪಿ), ಎಂ.ರಾಜೀವ ಶೆಟ್ಟಿ ಎಡ್ತೂರು (ಕಾಂಗ್ರೆಸ್), ಸರಪಾಡಿ: ವಿಲಾಸಿನಿ ಶಾಂತವೀರ ಪೂಜಾರಿ (ಬಿಜೆಪಿ), ಸ್ವಪ್ನಾ ವಿಶ್ವನಾಥ ಪೂಜಾರಿ( ಕಾಂಗ್ರೆಸ್), ಕಾವಳಮೂಡೂರು: ಧನಲಕ್ಷ್ಮೀ ಸಿ.ಬಂಗೇರ (ಕಾಂಗ್ರೆಸ್), ಹೇಮಲತಾ ದಿನೇಶ ಪೂಜಾರಿ( ಬಿಜೆಪಿ), ಉಳಿ: ಬೇಬಿ ಮಡೋಡಿ (ಕಾಂಗ್ರೆಸ್), ರಜನಿ ಕೇಶವ (ಬಿಜೆಪಿ), ಗೋಳ್ತಮಜಲು: ಐಡಾ ಸುರೇಶ್ (ಕಾಂಗ್ರೆಸ್), ಮಹಾಬಲ ಆಳ್ವ (ಬಿಜೆಪಿ), ಬಾಳ್ತಿಲ: ಚಂದ್ರಕಲಾ ಶೇಖರ ಪೂಜಾರಿ (ಕಾಂಗ್ರೆಸ್), ಲಕ್ಷ್ಮೀ ಗೋಪಾಲ ಆಚಾರ್ಯ (ಬಿಜೆಪಿ), ಮಾಣಿ: ಮಂಜುಳ ಕುಶಲ ಎಂ. ಪೆರಾಜೆ (ಕಾಂಗ್ರೆಸ್), ಸುಂದರಿ ಪಿ.ಶೆಟ್ಟಿ ಪೆರಾಜೆ( ಬಿಜೆಪಿ), ಕಡೇಶ್ವಾಲ್ಯ: ರಘು ಮಲ್ಲಡ್ಕ (ಬಿಜೆಪಿ), ಸುಂದರ ಮಲ್ಲಡ್ಕ (ಕಾಂಗ್ರೆಸ್), ಇಡ್ಕಿದು: ಕುಸುಮಲತಾ ಸೋಮಶೇಖರ ಶೆಟ್ಟಿ (ಕಾಂಗ್ರೆಸ್), ಬಿ.ವನಜಾಕ್ಷಿ ಇಡ್ಕಿದು(ಬಿಜೆಪಿ), ಪುಣಚ: ಕವಿತಾ ಎಸ್.ನಾಯ್ಕ (ಬಿಜೆಪಿ), ಗೀತಾ ಸರಸ್ವತಿ (ಕಾಂಗ್ರೆಸ್), ಪೆರುವಾಯಿ: ಪದ್ಮನಾಭ ನಾಯ್ಕ ಅಳಿಕೆ (ಬಿಜೆಪಿ), ಮನೋಜ್ ಕುಮಾರ್ ಬಿರ್ಕಾಪು( ಕಾಂಗ್ರೆಸ್), ಅಮ್ಮುಂಜೆ: ಮನೋಹರ ಕಂಜತ್ತೂರು (ಬಿಜೆಪಿ), ಶಿವಪ್ರಸಾದ್ ಕನಪಾಡಿ (ಕಾಂಗ್ರೆಸ್), ಕರಿಯಂಗಳ: ಯಶವಂತ ಪೂಜಾರಿ ಪೊಳಲಿ (ಬಿಜೆಪಿ), ರಾಜು ಕೋಟ್ಯಾನ್ (ಕಾಂಗ್ರೆಸ್)
ತ್ರಿಕೋನ ಸ್ಪರ್ಧೆ :
ತಾಲ್ಲೂಕಿನ ನರಿಕೊಂಬು ಕ್ಷೇತ್ರದಲ್ಲಿ ಗಾಯತ್ರಿ ರವೀಂದ್ರ ಸಪಲ್ಯ (ಕಾಂಗ್ರೆಸ್), ಜಯಂತಿ ವರದರಾಜ್ ಬಂಗೇರ (ಬಿಜೆಪಿ), ಭಾರತಿ ಪ್ರಶಾಂತ್ ಶಂಭೂರು( ಸಿಪಿಐ), ಪುದು: ಪದ್ಮಶ್ರೀ ದುರ್ಗೇಶ್ ಶೆಟ್ಟಿ (ಕಾಂಗ್ರೆಸ್), ರಾಜೀವಿ ಲಿಂಗಪ್ಪ (ಬಿಜೆಪಿ), ಪೌಝಿಯಾ ನೌಶಾದ್(ಎಸ್ಡಿಪಿಐ), ತುಂಬೆ: ಅಶೋಕ ಪೂಜಾರಿ (ಕಾಂಗ್ರೆಸ್), ಗಣೇಶ ಸುವರ್ಣ (ಬಿಜೆಪಿ), ಅಬ್ದುಲ್ ಅಝೀಝ್( ಎಸ್ಡಿಪಿಐ), ಸಜಿಪಮುನ್ನೂರು: ನಸೀಮಾ ಬೇಗಂ ನಂದಾವರ(ಕಾಂಗ್ರೆಸ್), ಸುಮತಿ ಎಸ್.ಖಂಡಿಗ (ಬಿಜೆಪಿ), ಪೌಝಿಯಾ ಇಬ್ರಾಹಿಂ (ಎಸ್ಡಿಪಿಐ), ವೀರಕಂಭ: ಗೀತಾ ಚಂದ್ರಶೇಖರ್ ಪೂಜಾರಿ(ಬಿಜೆಪಿ), ಜಯಂತಿ ವಸಂತ ಪೂಜಾರಿ(ಕಾಂಗ್ರೆಸ್), ಸರಸ್ವತಿ ಆರ್.ಮೂಲ್ಯ(ಸಿಪಿಐ), ಸಜಿಪಪಡು: ಗೀತಾ ಆನಂದ (ಬಿಜೆಪಿ), ಸವಿತ ಹೇಮಂತ ಕರ್ಕೇರ (ಕಾಂಗ್ರೆಸ್), ಜೀನತ್ (ಎಸ್ಡಿಪಿಐ), ಕುರ್ನಾಡು: ಉಮ್ಮರ್ ಫಜೀರು (ಕಾಂಗ್ರೆಸ್), ನವೀನ ಪೂಜಾರಿ ಪಾದಲ್ಪಾಡಿ( ಬಿಜೆಪಿ), ರಾಮಚಂದ್ರ ಬೆಳ್ಚಡ ಫಜೀರು ( ಸಿಪಿಐಎಂ), ಮಂಚಿ: ಅಬ್ಬಾಸ್ ಆಲಿ ಬಿ.ಎಂ.(ಕಾಂಗ್ರೆಸ್), ರಮೇಶ ರಾವ್ ಪತ್ತುಮುಡಿ (ಬಿಜೆಪಿ), ಆನಂದ ಶೆಟ್ಟಿಗಾರ್ ಕೊಳ್ನಾಡು (ಸಿಪಿಐಎಂ), ವಿಟ್ಲಪಡ್ನೂರು: ಭಾಗೀರಥಿ ಪಿ.ವಿ. (ಬಿಜೆಪಿ), ಶೋಭಾ ರೈ (ಕಾಂಗ್ರೆಸ್), ಅಮೀನ ನವಾಝ್(ಎಸ್ಡಿಪಿಐ), ಕನ್ಯಾನ: ಉದಯರಮಣ ಬಿ.(ಬಿಜೆಪಿ), ಕುಮಾರ್ ಭಟ್ ಬದಿಕೋಡಿ( ಕಾಂಗ್ರೆಸ್), ಚನಿಯಪ್ಪ ನಾಯ್ಕ (ಸಿಪಿಐಎಂ.)
ಚತುಷ್ಕೋನ ಸ್ಪರ್ಧೆ
ಸಜಿಪಮೂಡ: ಕೆ.ಸಂಜೀವ ಪೂಜಾರಿ ಕುಚ್ಚಿಗುಡ್ಡೆ(ಕಾಂಗ್ರೆಸ್), ಯಶವಂತ ಪೂಜಾರಿ ದೇರಾಜೆ (ಬಿಜೆಪಿ), ಎಸ್.ಎಂ.ಇಸ್ಮಾಯಿಲ್ (ಜೆಡಿಎಸ್), ಝಕಾರಿಯಾ ಮಾಲಿಕ್ (ಎಸ್ಡಿಪಿಐ), ಕರೋಪಾಡಿ: ಉಸ್ಮಾನ್ ಕರೋಪಾಡಿ (ಕಾಂಗ್ರೆಸ್), ಶಿವಪ್ರಸಾದ್ ಶೆಟ್ಟಿ (ಬಿಜೆಪಿ), ಅಣ್ಣು ಮೂಲ್ಯ(ಸಿಪಿಐಎಂ), ಮೊಯಿದ್ ಕುಂಞಿ (ಪಕ್ಷೇತರ), ನರಿಂಗಾನ: ಕೆ.ಚಂದ್ರಹಾಸ ಕರ್ಕೇ ರ (ಕಾಂಗ್ರೆಸ್), ಪ್ರೇಮಾನಂದ ರೈ (ಬಿಜೆಪಿ), ಮೊಯಿದಿನ್ ಶಿಹಾಬ್(ಜೆಡಿಎಸ್), ಸಲಾಂ ವಿದ್ಯಾನಗರ (ಎಸ್ಡಿಪಿಐ), ಕೆದಿಲ: ಆದಂ ಕುಂಞಿ (ಕಾಂಗ್ರೆಸ್), ಪದ್ಮನಾಭ ಭಟ್ ಪೆರ್ನಾಜೆ (ಬಿಜೆಪಿ), ಅಬೂಬಕ್ಕರ್ ಪಾಟ್ರಕೋಡಿ (ಪಕ್ಷೇತರ), ರಾಮಣ್ಣ ಗೌಡ ಕೆ.(ಪಕ್ಷೇತರ), ಬಾಳೆಪುಣಿ: ಸಿರಾಜುದ್ದೀನ್ (ಬಿಜೆಪಿ), ಹೈದರ್ ಕೈರಂಗಳ (ಕಾಂಗ್ರೆಸ್), ಬಾಬು ನರಿಂಗಾನ(ಜೆಡಿಎಸ್), ಕುಂಞಿ ಬಾವು (ಪಕ್ಷೇತರ)
ಗರಿಷ್ಟ ಮಂದಿ ಸ್ಪರ್ಧೆ :
ಕೊಳ್ನಾಡು ಕ್ಷೇತ್ರದಲ್ಲಿ ನಾರಾಯಣ ಶೆಟ್ಟಿ ಕುಲ್ಯಾರು(ಬಿಜೆಪಿ), ಫೆಲಿಕ್ಸ್ ವೇಗಸ್ (ಕಾಂಗ್ರೆಸ್), ದೇವದಾಸ ಕಾಡುಮಠ( ಸಿಪಿಐಎಂ), ಬಶೀರ್ ಕೊಳ್ನಾಡು (ಎಸ್ಡಿಪಿಐ), ಬಾಲಕೃಷ್ಣ ಗೌಡ ಕಾಯರಾ(ಪಕ್ಷೇತರ), ಬಿ.ಮಹಮ್ಮದ್ ರಫೀಕ್(ಪಕ್ಷೇತರ) ಹೀಗೆ ಎರಡೆರಡು ಮಂದಿ ಪಕ್ಷೇತರರು ಸೇರಿದಂತೆ ಆರು ಮಂದಿ ಅಭ್ಯರ್ಥಿ ಳು ಕಣದಲ್ಲಿ ಉಳಿದು ಕುತೂಹಲ ಕೆರಳಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. -ಮೋಹನ್ ಕೆ.ಶ್ರೀಯಾನ್ ರಾಯಿ
