ಬಂಟ್ವಾಳ; ತಾಲೂಕಿನ ಸಂಗಬೆಟ್ಟು ಜಿಲ್ಲಾ ಪಂಚಾಯತ್ ಕಾಂಗ್ರೇಸ್ ಅಭ್ಯರ್ಥಿ ಮಾಯಿಲಪ್ಪ ಸಾಲ್ಯಾನ್ ಅವರು ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ಹಾಗೂ ಕಾರ್ಯಕರ್ತರ ಸಭೆ ನಡೆಸಿ ಮತಯಾಚನೆ ಗೈದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಯವರು ಉಪಸ್ಥಿತರಿದ್ದು, ಸಂಗಬೆಟ್ಟು ಜಿ.ಪಂ. ಕ್ಷೇತ್ರ ಹಾಗೂ ತಾ.ಪಂ. ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿಮಾಡಿದರು.
IMG-20160210-WA0073
ಸಂಗಬೆಟ್ಟಿ ಜಿ.ಪಂ. ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯಗಳನ್ನು ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಹಂತಹಂತವಾಗಿ ಅಭಿವೃದ್ದಿ ಕಾರ್ಯಗಳು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ಕಾಂಗ್ರೇಸ್ ಅಭ್ಯರ್ಥಿ ಮಾಯಿಲಪ್ಪ ಸಾಲ್ಯಾನ್ ಅವರು ಮಾತನಾಡಿ, ತನ್ನನ್ನು ಸೇರಿದಂತೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಲ್ಲಾ ಕಾಂಗ್ರೇಸ್ ಅಭ್ಯರ್ಥಿ ಗಳನ್ನು ಗೆಲ್ಲಿಸುವ ಮೂಲಕ ಸಚಿವರ ಕೈ ಬಲಪಡಿಸುವಂತೆ ಮನವಿ ಮಾಡಿದರು. ಸಂಗಬೆಟ್ಟು ತಾ.ಪಂ.ನ ಕಾಂಗ್ರೇಸ್ ಅಭ್ಯರ್ಥಿ  ಪ್ರಭಾಕರ ಪ್ರಭು, ಬೂಡಾ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ಸದಾಶಿವ ಬಂಗೇರ, ಅಮ್ಮುರೈ, ಜಗದೀಶ್ ಕೊಯಿಲ ಹಾಗೂ ,  ಸ್ಥಳೀಯ ಕಾಂಗ್ರೇಸ್ ಸದಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *