ಮುಂಬಯಿ: ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಸಂಸ್ಥೆಯು ವಿೂರಾ ಭಯಂದರ್ ತುಳು ಕನ್ನಡ ಸಂಘದ ಸಹಯೋಗದೊಂದಿಗೆ ಇದೇ ಫೆ.14ನೇ ಆದಿತ್ಯವಾರ ಸಂಜೆ 4:00 ಗಂಟೆಗೆ ಹೊಟೇಲ್ ಪಯ್ಯಡೆ ರೆಸಿಡೆನ್ಸಿ, ದೀಪಕ್ ಹಾಸ್ಪಿಟಲ್‍ನ ಮುಂಭಾಗ, ವಿೂರಾ ಭಯಂದರ್ ರಸ್ತೆ, ವಿೂರಾರೋಡ್ ಪೂರ್ವ ಇಲ್ಲಿ ರೈಲ್ವೇ ಯಾತ್ರಿ ಸಂಘದ 6ನೇ ಸಾರ್ವಜನಿಕ ಜಾಗೃತಿ ಸಭೆ ಆಯೋಜಿಸಿದೆ ಎಂದು ರೈಲ್ವೇ ಸಂಘದ ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿತಿಳಿಸಿದ್ದಾರೆ.
ರೈಲ್ವೇ ಸಂಘದ ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ಮುಂದಾಳುತ್ವದಲ್ಲಿ ನಡೆಯಲಿರುವ ಮಹಾಸಭೆಯಲ್ಲಿ ಸಂಸದ ಗೋಪಾಲ್ ಸಿ.ಶೆಟ್ಟಿಭಾಗವಹಿಸಿ ಪ್ರಸಕ್ತ ರೈಲು ಪ್ರಯಾಣದ ಸೌಲಭ್ಯಗಳು, ಹೆಚ್ಚುವರಿ ರೈಲು ಆರಂಭ, ಸಮಯ ಬದಲಾವಣೆ ಹಾಗೂ ಪ್ರಯಾಣಿಕರ ಸೌಕರ್ಯಗಳ ಬಗ್ಗೆ ಅಧಿಕ ಮಾಹಿತಿ ನೀಡಲಿದ್ದಾರೆ. ಅಂತೆಯೇ ವಸಾಯಿ ರೋಡ್ ಜಂಕ್ಷನ್ ರೈಲ್ವೇ ಸ್ಟೇಶನ್‍ನಿಂದ ಈ ರೈಲು ಸೇವೆ ಕೊಂಕಣ ಮಾರ್ಗವಾಗಿ ಆರಂಭಿಸಲಾದ ವಸಾಯಿ ರೋಡ್-ಮಂಗಳೂರು ಗಣಪತಿ ಉತ್ಸವ ವಿಶೇಷ ರೈಲನ್ನು ಖಾಯಂ ಗೊಳಿಸುವ ನಿಟ್ಟಿನಲ್ಲೂ ಠಾರವು ಮಂಡಿಸಿ ಕಾರ್ಯಪ್ರವೃತ್ತರಾಗುವ ಬಗ್ಗೆ ಚರ್ಚಿಸಲಾಗುವುದು ಎಂದು ವಿರಾರ್ ಶಂಕರ್ ಶೆಟ್ಟಿ ತಿಳಿಸಿದ್ದಾರೆ.
