ಯಕ್ಷಗಾನ ಬಳವಣಿಗೆಗೆ ಕಲಾಪೋಷಕರ ಸಹಕಾರ ಪ್ರಾಮುಖ್ಯ
ಬಜಪೆ: ಯಕ್ಷಗಾನ ಹಾಗೂ ಕಲಾವಿದರ ಏಳಿಗೆಗೆ ಕಲಾಫೋಷಕರ ಸಹಕಾರ ಪ್ರಾಮುಖ್ಯ ಪಾತ್ರ ವಹಿಸುತ್ತದೆ. ಅನೇಕ ಕಲಾವಿದರ ವೈಯುಕ್ತಿಕ ಬದುಕು ಸಂಕಷ್ಟದಲ್ಲಿರುತ್ತದೆ. ಅವರಿಗೆ ಸ್ಪಂಸುವ ಕಲಾಪೋಷಕ ಹೃದಯಗಳು ಹಾಗೂ ಅದೇನೇ ಆಧುನಿಕತೆಯ ಪ್ರಭಾವವಿದ್ಧರೂ ಯಕ್ಷಗಾನದ ಪರಂಪರೆಯನ್ನು ಉಳಿಸುವ ಸಲುವಾಗಿ ಪ್ರಯತ್ನ ಸಾಗಬೇಕು. ಎಂದು ಉಳ್ಳಾಲ ಶ್ರೀ ಚಿರುಂಭ ಭಗವತೀ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಚಂದ್ರಹಾಸ ಉಳ್ಳಾಲ ಅವರು ಹೇಳಿದರು.
ಅವರು ಶನಿವಾರ ಬಜಪೆ-ಮುರನಗರ ಇಲ್ಲಿ ಉಳ್ಳಾಲ ಚೀರುಂಭ ಭಗವತೀ ಯಕ್ಷಗಾನ ಮೇಳದ ಯಕ್ಷಗಾನ ಬಯಲಾಟದ ಸಂದರ್ಭ ಜರಗಿದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಗವತಿಗೆ ಬೆಳ್ಳಿ ಕಿರೀಟ ಸಮರ್ಪಣೆ:
ಬಜಪೆ ವಿಜಯ ವಿಠಲ ಭಜನಾ ಮಂದಿರದ ಅಧ್ಯಕ್ಷ ಉದ್ಯಮಿ ಕೃಷ್ಣ ಕಲ್ಲೋಡಿ ಸುಮಾ ದಂಪತಿ ಉಳ್ಳಾಲ ಚೀರುಂಭ ಭಗವತಿ ಯಕ್ಷಗಾನ ಮೇಳಕ್ಕೆ ಸುಮಾರು ರೂ.65 ಸಾವಿರ ವೆಚ್ಚದಲ್ಲಿ ಬೆಳ್ಳಿಯ ಕಿರೀಟವನ್ನು ಕೊಡುಗೆಯಾಗಿ ನೀಡಿದ್ಧು ಭವ್ಯ ಮೆರವಣಿಗೆಯಲ್ಲಿ ವಿಜಯ ವಿಠಲ ಭಜನಾ ಮಂದಿರದಿಂದ ಬಜಪೆ ಪೇಟೆಯಾಗಿ ಮುರನಗರಕ್ಕೆ ಕೊಂಡೊಯ್ದು ವಿವತ್ತಾಗಿ ಸಮರ್ಪಿಸಲಾಯಿತು. ಜರಗಿದ ಸಭಾ ಕಾರ್ಯಕ್ರಮದಲ್ಲಿ ಕಲಾಪೋಷಕ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭ ಆಕರ್ಷಕ ವಿನ್ಯಾಸದೊಂದಿಗೆ ಕಿರೀಟವನ್ನು ತಯಾರಿಸಿದ ಸುರೇಂದ್ರ ಆಚಾರ್ಯ ಅವರನ್ನು ಅಭಿನಂದಿಸಲಾಯಿತು.
ಉದ್ಯಮಿ ದೀಪಕ್ ಕೋಟ್ಯಾನ್, ವರಪ್ರಸಾದ್ ಶೆಟ್ಟಿ, ಉಳ್ಳಾಲ ಭಗವತಿ ಕ್ಷೇತ್ರದ ಯಶವಂತ ಉಳ್ಳಾಲ, ಸುಂಕದಕಟ್ಟೆ ಎಸ್‍ಎನ್‍ಎಸ್ ಸಮೂಹ ಸಂಶ್ಥೆಗಳ ಟ್ರಸ್ಟಿ ನಾರಾಯಣ ಪೂಜಾರಿ, ಸಸಿಹಿತ್ಲು ಭಗವತೀ ಕ್ಷೇತ್ರದ ಯಕ್ಷಗಾನ ಮಂಡಳಿಯ ಪ್ರಮುಖರಾದ ರಾಜೇಶ್ ಗುಜರನ್, ಸೋಮಪ್ಪ ಬೆಳ್ಚಡ, ಆನಂದ ಬಿ.ನಾಗೇಶ್ ಯು, ಮುಂತಾದವರು ಉಪಸ್ಥಿತರಿದ್ಧರು.
ಉಳ್ಳಾಲ ಚೀರುಂಭ ಭಗವತೀ ಕ್ಷೇತ್ರದ ಪ್ರದಾನ ಅರ್ಚಕ ಮಂಜಪ್ಪ ಕಾರ್ನಡ್ ಅವರು ಧಾರ್ಮಿಕ ವಿಗಳನ್ನು ನೆರವೇರಿಸಿ ಶುಭಾಶಂಸನಗೈದರು. ಚರಣ್‍ರಾಜ್ ಸ್ವಾಗತಿಸಿದರು. ನಮಕ ಮತ್ತು ಬಳಗ ಯಕ್ಷಗಾನೀಯ ಪ್ರಾರ್ಥನೆಗೈದರು. ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಗಾನ ಬಯಲಾಟ ಭಗವತೀ ಮಹಾತ್ಮೆ ಪ್ರದರ್ಶನಗೊಂಡಿತು.
