ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈತ್ರೋಡಿ ಕ್ವಾರ್ಟರ್ಸ್ ಎಂಬಲ್ಲಿ ಕಳೆದ ಒಂದು ವಾರದಿಂದ ಕೊಳವೆ ಬಾವಿ ಪಂಪ್ ದುರಸ್ತಿ ನೆಪದಲ್ಲಿ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡ ಪರಿಣಾಮ ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಅರ್ಧ ದಿನ ಮಾತ್ರ ತರಗತಿಯಲ್ಲಿ ಉಳಿಯುತ್ತಿದ್ದ ಪುಟಾಣಿಗಳು ಶುಕ್ರವಾರ ಮತ್ತೆ ನೀರು ಪೂರೈಕೆಗೊಂಡ ಹಿನ್ನೆಲೆಯಲ್ಲಿ ಮಕ್ಕಳು ದಿನವಿಡೀ ತರಗತಿಯಲ್ಲಿ ಇದ್ದು ಸಂತಸ ಪಟ್ಟರು.

