ಬಂಟ್ವಾಳ: ಇಲ್ಲಿನ ತಾಲೂಕು ಕಚೇರಿಯ ಹಳೆಯ ಸಂಕೀರ್ಣದ ನೀರು ಸಂಪರ್ಕ ಕಳೆದ 10 ದಿನಗಳಿಂದ ಸ್ಥಗಿತಗೊಂಡಿದೆ. ಕಟ್ಟಡದಲ್ಲಿ ಸರಕಾರಿ ಕಚೇರಿಗಳು, ವಾಣಿಜ್ಯ ಮಳಿಗೆಗಳು ಕಾರ್ಯಾಚರಿಸುತ್ತಿರುವುದರಿಂದ ಕುಡಿಯುವ ನೀರಿಗಾಗಿ ಪರದಾಟ ಉಂಟಾಗಿದೆ. ನೀರು ಸಂಪರ್ಕವನ್ನು ಕಲ್ಪಿಸುವಂತೆ ಪುರಸಭೆಗೆ ಹಲವು ಬಾರಿ ಮನವಿ ಮಾಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಾಪಂ ಅಧಿಕಾರಿಗಳು ಪ್ರತಿಯಿಸಿದ್ದಾರೆ. ಶೌಚಾಲಯದಲ್ಲಿ ನೀರು ಪೂರೈಕೆ ನಿಲ್ಲಿಸಲಾಗಿದ್ದರಿಂದ ಕಚೇರಿ ಅಧಿಕಾರಿ, ಸಿಬ್ಬಂದಿಗಳು, ಸಾರ್ವಜನಿಕರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಶೌಚಾಲಯಕ್ಕಾಗಿ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳೀಯ ಕಚೇರಿಗಳನ್ನು ಅವಲಂಭಿಸುತ್ತಿದ್ದಾರೆ.

images
ಕಟ್ಟಡದಲ್ಲಿರುವ ಆಹಾರ ಶಾಖೆ, ಚುನಾವಣಾ ಶಾಖೆ, ನಾಡಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪ್ರೆಸ್‍ಕ್ಲಬ್, ಹೊಟೇಲ್ ಮತ್ತಿತರ ಸಂಸ್ಥೆಗಳಿಗೆ ಸರಬರಾಜುಗೊಳಿಸಲಾಗುತ್ತಿದ್ದ ನೀರನ್ನು ಟ್ಯಾಂಕ್ ಮೂಲಕ ಸಂಗ್ರಹಿಸಲಾಗುತ್ತಿತ್ತು. ಕಳೆದ 10 ದಿನಗಳಿಂದ ಟ್ಯಾಂಕಿಗೆ ನೀರು ಪೂರೈಕೆಯಾಗುತ್ತಿಲ್ಲ ಎಂದು ನಾಡಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. ನೀರು ಸಂಪರ್ಕಕ್ಕೆ ತಕ್ಷಣ ಕ್ರಮ ಜರಗಿಸುವಂತೆ ತಹಸೀಲ್ದಾರ್ ಪುರಂದರ ಹೆಗ್ಡೆ, ತಾಪಂ ಕಾರ್ಯನಿರ್ವಹಕ ಅಧಿಕಾರಿ ಸಿಪ್ರಿಯನ್ ಮಿರಾಂದ ಅವರು ಪುರಸಭೆ ಅಧಿಕಾರಿಗಳು ಸೂಚಿಸಿದ್ದಾರೆ. ತಾಂತ್ರಿಕ ದೋಷದಿಂದಾಗಿ ನೀರು ಸಂಪರ್ಕ ಕಡಿತಗೊಂಡಿದ್ದು, ಶೀಘ್ರದಲ್ಲೇ ಸಂಪರ್ಕಗೊಳಿಸಲಾಗುವುದು ಎಂದು ಪುರಸಭಾಧಿಕಾರಿಗಳು ಹೇಳಿದ್ದಾರೆ.

By Suddi9

Leave a Reply

Your email address will not be published. Required fields are marked *