ಕುಪ್ಪೆಪದವು: ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಪ್ರೇರಣಾ ಮಹಿಳಾ ಸ್ವ- ಸಹಾಯ ಸಂಘ ಕೈಕಂಬ ವಲಯ ಇದರ ನೇತೃತ್ವದಲ್ಲಿ ಸಮುದಾಯದ ಮಹಿಳೆಯರಿಗೆ ಕಾನೂನು ಮಾಹಿತಿ ಕಾರ್ಯಕ್ರಮವು ಕುಪ್ಪೆಪದವು ಆಶಾಕಿರಣ ಚರ್ಚ್ ಹಾಲ್‍ನಲ್ಲಿ ಡಿ.12ರಂದು ಶನಿವಾರ ನಡೆಯಿತು.
15vp mahiti karyakramaಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಗೌರಿ ವಕೀಲರು ಆಗಮಿಸಿ ಕಡ್ಡಾಯ ಮದುವೆ ನೊಂದಾವಣಿ, ಕಾನೂನು ಬದ್ದ ಮದುವೆ, ಜೀವನಾಂಶ, ಮಕ್ಕಳ ರಕ್ಷಣೆ ವಿಷಯಗಳ ಬಗ್ಗೆ ಸಮುದಾಯದ ಮಹಿಳೆಯರಿಗೆ ಮಾಹಿತಿ ನೀಡಿದರು.
ಯೋಜನಾ ಸಂಯೋಜಕರಾದ ವಿಲಿಯಂ ಸ್ಯಾಮುವೆಲ್‍ರವರು ಸ್ವ ಉದ್ಯೋಗ ಮತ್ತು ಮಹಿಳೆಯರಿಗೆ ಕಾನೂನು ಮಾಹಿತಿಯ ಅವಶ್ಯಕತೆಯ ಕುರಿತು ಮಾತನಾಡಿದರು.
ಸ್ವ-ಸಹಾಯ ಸಂಘದ ಸದಸ್ಯರಾದ ಸವಿತಾ ಅತಿಥಿಗಳನ್ನು ಸ್ವಾಗತಿಸಿದರು. ಯೋಜನಾ ಮೇಲ್ವಿಚಾರಕಿ ರೇಶ್ಮಾ ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *