ಬಂಟ್ವಾಳ:ತಾಲ್ಲೂಕಿನ ಕೆಲವೆಡೆ ಸೋಮವಾರ ಸಂಜೆ ಭಾರೀ ಸಿಡಿಲು ಮತ್ತು ಮಿಂಚಿನೊಂದಿಗೆ ದಿಢೀರ್ ಮಳೆಯಾಗಿದೆ. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ವಾತಾವರಣ ತಂಪಾಗಿಸಿತು.
ತಾಲ್ಲೂಕಿನ ಕೆಲವೆಡೆ ತುಂತುರು ಮಳೆ ಮಾತ್ರ ಬಂದಿದ್ದು, ಇನ್ನೂ ಕೆಲವೆಡೆ ದಿಢೀರ್ ಮಳೆಯಿಂದಾಗಿ ಒಣ ಅಡಿಕೆ ಮತ್ತು ಭತ್ತ ಕೊಯ್ಲಿಗೆ ಹಾನಿಯಾಗಿದೆ ಎಂಬ ಅಭಿಪ್ರಾಯ ರೈತರಿಂದ ಕೇಳಿ ಬಂದಿದೆ.

